ಬೆಳಗಾವಿ :
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ( ಇಗ್ನೋ ) ದೂರ ಶಿಕ್ಷಣದ ವಿವಿಧ ಕೋರ್ಸ್ ಗಳಿಗೆ 2023 ನೇ ಸಾಲಿಗೆ ಪ್ರವೇಶ ಪ್ರಾರಂಭವಾಗಿದೆ. ಇಗ್ನೋ ಇದು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಒಂದು ಕೇಂದ್ರೀಯ ವಿಶ್ವವಿದ್ಯಾಲಯವಾಗಿದೆ.
ಇತ್ತೀಚಿಗೆ ಬೆಂಗಳೂರಿನ ನ್ಯಾಕ್ ಸಂಸ್ಥೆಯಿಂದ A ++ ಮಾನಂಕನವನ್ನು ಪಡೆದಿದೆ. ಆಸಕ್ತಿಯುಳ್ಳವರು ಬೆಳಗಾವಿಯ ಆರ್.ಪಿ.ಡಿ. ಮಹಾವಿದ್ಯಾಲಯಲ್ಲಿ ಸ್ಥಿತ ಇಗ್ನೋ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಲು ಕೇಂದ್ರದ ಸಂಯೋಜಕ ಪ್ರಾ . ಪ್ರಸನ್ನ ಜೋಶಿಯವರು ತಿಳಿಸಿದ್ದಾರೆ. ಅಧ್ಯಯನ ಕೆಂದ್ರದಲ್ಲಿ , ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಹಾಗೂ ಡಿಪ್ಲೋಮಾ ಜೊತೆಗೆ , ಎಮ್.ಕಾಮ್ , ಎಮ್.ಬಿ.ಎ , ಎಮ್.ಸಿ.ಎ. ಬಿ.ಸಿ.ಎ. ಎಮ್.ಎ ಹೀಗೆ ಸುಮಾರು ಹಾಗು ಸರ್ಟಿಫಿಕೇಟ್ ವಿವಿಧ ಸ್ನಾತಕ , ಸ್ನಾತಕೋತ್ತರ , ಡಿಪ್ಲೋಮಾ ಕೋರ್ಸಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಈ ಎಲ್ಲಾ ಕೋರ್ಸುಗಳು ಅತ್ಯಂತ ರಿಯಾಯತಿ ಹಾಗೂ ಅಗ್ಗ ದರದಲ್ಲಿ ಉಪಲಬ್ಧವಾಗಿವೆ . ಅನೇಕ ಕೋರ್ಸುಗಳು ಪರಿಶಿಷ್ಟ ಜಾತಿ ಹಾಗು ಪಂಗಡದ ಅಭ್ಯರ್ಥಿಗಳಿಗೆ ಉಚಿತವಾಗಿವೆ . ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ 0831-2485997 / 9880392021 / 9449692186 ಗೆ ಸಂಪರ್ಕಿಸಬಹುದು ಅಥವಾ ಕಚೇರಿ ವೇಳೆಯಲ್ಲಿ ಸಂಜೆ 5.00 ರಿಂದ 8.00 ಘಂಟೆ ವರೆಗೆ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಲಾಗಿದೆ.