ಟಾಟಾ ಗ್ರೂಪ್ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ಇತ್ತೀಚೆಗೆ ಕಾರು ಅಪಘಾತದಲ್ಲಿ ಮೃತಪಟ್ಟ ನಂತರ ಟ್ಬೆಲ್ಟ್ ವಿಚಾರ ಮುನ್ನೆಲೆಗೆ ಬಂದು ಸಾಕಷ್ಟು ಚರ್ಚೆ ಕಾರಣವಾಗಿತ್ತು. ಯಾಕೆಂದರೆ ಅವರು ಸೀಟ್ ಬೆಲ್ಟ್ ಧರಿಸದ ಕಾರಣ ಏರ್ ಬ್ಯಾಗ್ ತೆರೆಯದೆ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿಯೇ ಕೇಂದ್ರ ಸರ್ಕಾರ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸುವ ಕರಡನ್ನು ಪ್ರಕಟಿಸಿತ್ತು.
ಬೆಂಗಳೂರು:
ರಾಜ್ಯದಲ್ಲಿ ವಾಹನ ಚಾಲನೆ ವೇಳೆಯಲ್ಲಿ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.
ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೂಚನೆ ಪ್ರಕಾರ ರಾಜ್ಯ ಪೊಲೀಸರು ಈ ಹೊಸ ಆದೇಶ ಹೊರಡಿಸಲಾಗಿದೆ.
ಈ ಕುರಿತು ಇಂದು, ಬುಧವಾರ ಆದೇಶ ಹೊರಡಿಸಿರುವ ಅವರು, ಇಂದಿನಿಂದಲೇ ಜಾರಿಗೆ ಬರುವಂತೆ ರಾಜ್ಯದಲ್ಲಿ ವಾಹನ ಚಾಲಾಯಿಸುವಾಗ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ವಾಹನ ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸದೇ ಇದ್ದರೆ 1 ಸಾವಿರ ರೂ.ಗಳ ದಂಡ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ. ಈ ಹಿಂದೆ ಇದು 500 ರೂ. ಇದ್ದು, ಈಗ ಪರಿಷ್ಕೃತ ಆದೇಶದಲ್ಲಿ ದುಪ್ಪಟ್ಟುಗೊಳಿಸಲಾಗಿದೆ.
ವಾಹನ ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸದಿದ್ದರೆ ಅಪಘಾತವಾದಂತ ಸಂದರ್ಭದಲ್ಲಿ ಏರ್ಬ್ಯಾಗ್ ಓಪನ್ ಆಗುವುದಿಲ್ಲ. ಹೀಗೆ ಏರ್ ಬ್ಯಾಗ್ ಓಪನ್ ಆಗದೇ ಇದ್ದಾಗ ಅಪಘಾತದ ವೇಳೆಯಲ್ಲಿ ಸಾವು ನೋವು ಸಂಭವಿಸಿವೆ.