ಜನ ಜೀವಾಳ ವಿಶೇಷ : ಬೆಳಗಾವಿ : ಬೆಳಗಾವಿಯಲ್ಲಿ ಶುಕ್ರವಾರ ನಿಪ್ಪಾಣಿಯ ಐಟಿ ಅಧಿಕಾರಿಯನ್ನು ಬಂಧಿಸಿರುವ ವಿಷಯ ಈಗ ಭಾರೀ ಚರ್ಚೆಗೊಳಗಾಗಿದೆ.
ಯಾಕೆಂದರೆ ಆದಾಯ ತೆರಿಗೆ ಇಲಾಖೆ (ಐಟಿ) ಕೇಂದ್ರ ಸರ್ಕಾರದ ಸ್ವತಂತ್ರ ಇಲಾಖೆ. ಆದರೆ ಇದೀಗ ಆ ಇಲಾಖೆಯ ಅಧಿಕಾರಿ ಲಂಚ ಕೇಳಿದ್ದಾರೆ ಎಂಬ ಆರೋಪದ ಮೇಲೆ ಮೇರೆಗೆ ಬೆಳಗಾವಿ ಪೊಲೀಸರು ಬಂಧಿಸಿರುವುದು ಸರಿಯೇ ? ಇಷ್ಟಕ್ಕೂ ಅವರನ್ನು ಬಂಧಿಸಲು ಪೊಲೀಸರಿಗೆ ಅಧಿಕಾರ ಇದೆಯೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಹರಡಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿ ಸುಲಿಗೆಗೆ ಮುಂದಾದ್ರಾ ? ಪೊಲೀಸರ ಹೇಳಿಕೆಯಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿ ಲಂಚ ಕೇಳಿದ ಆರೋಪ ಇದೆಯಾದರೂ
ಬೆಳಗಾವಿಯ ಪೊಲೀಸರು ಆದಾಯ ತೆರಿಗೆ ಇಲಾಖೆಯ ಅಧಿಕಾರಿಯನ್ನು ಸಿನಿಮಿಯ ಮಾದರಿಯಲ್ಲಿ ಬಂಧಿಸಿರುವುದು ಉಭಯ ಇಲಾಖೆಗಳ ನಡುವೆ ಸಂಘರ್ಷಕ್ಕೆ ಕಾರಣವಾಗಲಿದೆ ಕಾದು ನೋಡಬೇಕು. ಪೋಲಿಸ್ ಇಲಾಖೆ ಕರ್ನಾಟಕ ರಾಜ್ಯ ಸರಕಾರದ ವ್ಯಾಪ್ತಿಗೆ ಒಳಪಟ್ಟರೆ ಆದಾಯ ತೆರಿಗೆ ಇಲಾಖೆ ಕೇಂದ್ರ ಸರಕಾರದ ವ್ಯಾಪ್ತಿಗೆ ಒಳಪಟ್ಟಿದೆ.
ಆದಾಯ ತೆರಿಗೆ ಇಲಾಖೆ ಅದೊಂದು ಸ್ವಾತಂತ್ರ್ಯ ಇಲಾಖೆ. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ಇಲಾಖೆ. ಆದರೆ ಅಂತಹ ಇಲಾಖೆಯ ಅಧಿಕಾರಿಯನ್ನು ವಿಚಾರಿಸಲು ಪೊಲೀಸರು ಮುಂದಾಗಿರುವುದು ಇದೀಗ ಬೆಳಗಾವಿಯಲ್ಲಿ ಉಭಯ ಇಲಾಖೆಗಳ ನಡುವೆ ಹೊಸ ಸಂಘರ್ಷಕ್ಕೆ ಕಾರಣವಾಗಿದೆ.
*IT ಇಲಾಖೆ ಅಧಿಕಾರಿಗಳ ವಾದವೇನು?:*
ಬೆಳಗಾವಿಯ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ನಮ್ಮ ಇಲಾಖೆ ಸ್ವತಂತ್ರವಾದ ಇಲಾಖೆ. ನಮ್ಮ ಇಲಾಖೆಗೆ ಸಂಬಂಧಪಟ್ಟಂತೆ ಯಾವುದೇ ದೂರುಗಳು ಇದ್ದರೂ ಸಿಬಿಐ ಮಾತ್ರ ಪ್ರಶ್ನಿಸುವ ಹೊಣೆಗಾರಿಕೆ ಹೊಂದಿದೆ. ಪೊಲೀಸರಿಗೆ ನಮ್ಮನ್ನು ಪ್ರಶ್ನಿಸುವ ಯಾವ ಅಧಿಕಾರವೂ ಇಲ್ಲ ಎಂದು ತಿಳಿಸಿದ್ದಾರೆ.
ಸ್ಥಳೀಯ ಪೋಲೀಸರು CBI ಗೆ ಮುಂಚಿತವಾಗಿ ಮಾಹಿತಿ ನೀಡಬೇಕಾಗಿತ್ತು. ಇಲ್ಲದಿದ್ದರೆ ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಬಹುದಿತ್ತು. ಕೇಂದ್ರದ ತನಿಖಾ ಸಂಸ್ಥೆಗೂ ತಿಳಿಸಬಹುದಿತ್ತು. ದೂರು ನೈಜವಾಗಿದ್ದರೆ ಅದೇ ವ್ಯಾಪ್ತಿಯಲ್ಲಿ ದಾಖಲಾಗಬಹುದಿತ್ತು. ಸರಿಯಾಗಿ ತನಿಖಾ ಏಜೆನ್ಸಿಗೆ ತಿಳಿಸಿದ್ದರೆ ಅವರು ಕ್ರಮ ಕೈಗೊಳ್ಳಬಹುದಿತ್ತು. ಅದು ಈಗ ವಿಫಲವಾಗಿದೆ. ಇವರು ಮಾಡಿದ ದೂರು ಕೂಡ ಕಾನೂನಿನ ಮುಂದೆ ನಿಲ್ಲಲ್ಲ. ಇಲ್ಲ ಸಲ್ಲಧ್ದು ಹೇಳಲು ಬರುವದಂತೂ ಅಲ್ಲ ಇದು. ಮೊದಲೇ ಪೋಲೀಸರಿಗೆ ಮಾಹಿತಿ ಇತ್ತು. ಆದರೆ ಆ ಮಾಹಿತಿಯನ್ನು ಕಳಿಸುವಲ್ಲಿ ವಿಫಲವಾಗಿದ್ದಾರೆ. ಇದು ಪೋಲೀಸರ ನೇರ ನಿರ್ಲಕ್ಷ್ಯ. ತಮ್ಮ ವೈಯಕ್ತಿಕ ವರ್ಚಸ್ಸಿಗಾಗಿ ಮಾಧ್ಯಮವನ್ನು ಬಳಸಿಕೊಂಡಿದ್ದಾರೆ. ಇದು ಕೇಂದ್ರದ ವರ್ಚಸ್ಸನ್ನು ಕುಂದಿಸುವ ಪ್ರಯತ್ನ. ನಮ್ಮ ಇಲಾಖೆ ಕಾದು ನೋಡುತ್ತಿದೆ ಯಾವ ಆಧಾರದ ಮೇಲೆ ದೂರು ದಾಖಲಿಸುತ್ತಾರೆ. ಮೌಖಿಕವಾಗಿ ಮಾತ್ರ ನಮ್ಮೊಂದಿಗೆ ಸಂಪರ್ಕ ಸಾಧಿಸಿರುವ ಪೋಲೀಸ್ ಇಲಾಖೆ ಇನ್ನೂ ಯಾವುದೇ ಲಿಖಿತ ಮಾಹಿತಿ ಒದಗಿಸಿಲ್ಲ ಎನ್ನುತ್ತಾರೆ IT ಉನ್ನತ ಅಧಿಕಾರಿಗಳು.
ಸಾ.ಕಾ. ಸುಜೀತ ಮುಳಗುಂದ ಏನಂತಾರೆ?: ಅನ್ಯಾಯವಾಗುತ್ತಿದ್ದ ಪೀಡಿತರು ಆದಾಯತೆರಿಗೆ ಡಿ.ಜಿ.ಯವರಿಗೆ ದೂರು ದಾಖಲಿಸಬೇಕಿತ್ತು ಅಥವಾ CBI ಗೆ ದೂರಬಹುದಿತ್ತು. ರಾಜ್ಯ ಸರಕಾರದ ಪೋಲೀಸರಿಗೆ ತಿಳಿಸಿದ್ದು ಯಾವುದೇ ಪ್ರಯೋಜವಾಗಲಾರದು. ಅಧಿಕಾರಿಗಳು ಮುಂದಾಲೋಚಿಸಬೇಕಿತ್ತು. ಕ್ರೆಡಿಟ್ ತೆಗೆದುಕೊಳ್ಳಲು ಈ ರೀತಿಯ ಹರಸಾಹಸ ಮಾಡಬಾರದಿತ್ತು. ಇದು ರಾಜ್ಯ ಮತ್ತು ಕೇಂದ್ರದ ಇಲಾಖೆಗಳ ನಡುವೆ ಸಂಘರ್ಷಕ್ಕೆ ಎಡೆ ಮಾಡಿ ಕೊಟ್ಟಂತಾಗಿದೆ.