ಬೆಳಗಾವಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಇನ್ನಷ್ಟು ಕಾಲ ಬದುಕಿದ್ದರೆ ಈ ದೇಶದ ಇತಿಹಾಸವೇ ಬದಲಾಗುತ್ತಿತ್ತು ಎಂದು ಜಿ.ಎ. ಕಾಲೇಜಿನ ಪ್ರಾಚಾರ್ಯ ಆರ್ .ಎಸ್. ಪಾಟೀಲ ಹೇಳಿದರು.
ಬೆಳಗಾವಿ ಜಿ.ಎ. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೊಡುಗೆ ಅತ್ಯಂತ ಹಿರಿದಾಗಿದೆ. ಭಾರತಮಾತೆಯ ವೀರ ಪುತ್ರರಾಗಿದ್ದ ನೇತಾಜಿ ಅವರ ವಿಚಾರಗಳು ದೇಶದ ಜನರ ರಕ್ತದ ಕಣಕಣದಲ್ಲಿ ಭಾರತೀಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.
ಐಸಿಎಸ್ ಪರೀಕ್ಷೆಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಪಾಸ್ ಆಗಿದ್ದ ಅವರು, ಎಲ್ಲಾ ಹುದ್ದೆಗಳನ್ನು ತೊರೆದು ದೇಶದ ಜನರ ಸೇವೆಗಾಗಿ ಸ್ವಾತಂತ್ರ್ಯಕ್ಕಾಗಿ ಭದ್ರವಾದ ಅಡಿಪಾಯ ಹಾಕಿದರು. ಐಎನ್ಎಸ್ ಎಂಬ ಸಂಘಟನೆಯನ್ನು ಸ್ಥಾಪಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಬೆಳೆಸಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅವರು ಶ್ರಮಿಸಿದ್ದರು. ಅವರು ಇನ್ನಷ್ಟು ಕಾಲ ಬಾಳಿ ಬದುಕಿದ್ದರೆ ಈ ದೇಶದ ಇತಿಹಾಸವೇ ಬದಲಾಗುತ್ತಿತ್ತು. ಅವರ ಅಪ್ರತಿಮ ಹೋರಾಟ, ಅವರ ಕನಸು ಸದಾ ಸ್ಮರಣೀಯವಾಗಿದೆ. ಸ್ವಾತಂತ್ರ್ಯ ಹೋರಾಟದ ದಂತಕತೆಯಾಗಿರುವ ಅವರ ವಿಚಾರಗಳು ದೇಶದ ಯುವಜನ ಜನತೆಯ ಸ್ಪೂರ್ತಿಯ ಸೆಲೆಯಾಗಿವೆ ಎಂದು ಎಂದು ಅವರು ಹೇಳಿದರು.
ಉಪ ಪ್ರಾಚಾರ್ಯ ಸಿ.ಪಿ.ದೇವಋಷಿ, ಎಚ್ .ಜಿ. ವೀರಗಂಟಿ, ಪಾರ್ವತಿ ಚಿಮ್ಮಡ ಉಪಸ್ಥಿರಿದ್ದರು.