ಬೆಳಗಾವಿ : ನಂದಿನಿ ಕನ್ನಡಿಗರ ಮನೆಮನೆಯ ಒಡನಾಡಿಯಾಗಿದ್ದು, ಅದರ ಬದಲಾಗಿ ‘ಅಮೂಲ್ ‘ ನಂತಹ ಬಾಹ್ಯ ಉತ್ಪನ್ನಗಳನ್ನು ಇಲ್ಲಿ ಮಾರಲು ಯತ್ನಿಸಿದರೆ ಎಚ್ಚರ…!
ಅಮೂಲ್ ಉತ್ಪನ್ನಗಳನ್ನು ರಾಜ್ಯದಲ್ಲಿ ನಮ್ಮ ನಂದಿನಿಗೆ ಪರ್ಯಾಯವಾಗಿ ಪೈಪೋಟಿಗೆ ಇಳಿಸುವ ಬಗ್ಗೆ ನಡೆದ ಜದ್ದಾಜಿದ್ದಿಗೆ ಕರವೇ ಅಸಮಧಾನ ವ್ಯಕ್ತಪಡಿಸಿದೆ.
ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅಮೂಲ್ ಉತ್ಪನ್ನಗಳನ್ನು ಮಾರಾಟ ಮಾಡಲು ಇಲ್ಲವೇ ಪ್ರದರ್ಶನಕ್ಜೆ ಅನುವು ಮಾಡಿಕೊಡಬಾರದು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಸರಕಾರಕ್ಕೆ ಎಚ್ಚರಿಕೆಯ ಮನವಿ ಮಾಡಿದ್ದಾರೆ.
ನಂದಿನಿ ರೈತರು ಮತ್ತು ಗುಡಿಕೈಗಾರಿಕೋದ್ಯಮದ ನರನಾಡಿಯಾಗಿದೆ. ದೇಶದಲ್ಲೇ ಹೆಸರುವಾಸಿಯಾದ ನಂದಿನಿ ಮೇಲೆ ಇತರರು ವಕ್ರದೃಷ್ಟಿ ಬಿದ್ದಿದ್ದು, ಇದು ಕರ್ನಾಟಕದ ಡೈರಿ ಉದ್ಯಮ ಹಾಳು ಮಾಡುವ ವ್ಯವಸ್ಥಿತ ಸಂಚಾಗಿದೆ ಎಂದು ಕರವೇ ಆಕ್ರೋಶ ವ್ಯಕ್ತಪಡಿಸಿದೆ
ಅಮೂಲ್ ಉತ್ಪನ್ನಗಳು ಮಾರಾಟ ಇಲ್ಲವೇ ಪ್ರದರ್ಶನ ಕಂಡುಬಂದರೆ ನಾಡಿನ ಹಿತಾಸಕ್ತಿ ಕಾಯುವ ಸಂಬಂಧ ದಾಳಿ ಮಾಡುವುದಾಗಿ ಕರವೇ ಎಚ್ಚರಿಸಿದೆ.