ಬೆಳಗಾವಿ: ಕಲುಷಿತ ಚರಂಡಿ ನೀರು, ಹಾನಿಕಾರಕ ರಾಸಾಯನಿಕ ಬಣ್ಣ, ರಾಸಾಯನಿಕ ಚಾಕಲೇಟ್ ಪ್ಲೇವರ್ಗಳನ್ನು ಬಳಕೆ ಮಾಡಿ ಐಸ್ ಕ್ಯಾಂಡಿ ತಯಾರಿಸುತ್ತಿದ್ದ ಕಾರ್ಖಾನೆಗೆ ಬೀಗ ಜಡಿದಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಿರಣಗಿ ಗ್ರಾಮದಲ್ಲಿ ನಡೆದಿದೆ.
ಕಳೆದ ಐದಾರು ವರ್ಷಗಳಿಂದ ಐಸ್ ಫ್ಯಾಕ್ಟರಿಯನ್ನು ಕಿರಣಗಿ ಗ್ರಾಮದ ಶ್ರೀಕಾಂತ ಭಜಂತ್ರಿ ಎಂಬುವವರು ನಡೆಸಿಕೊಂಡು ಬರುತ್ತಿದ್ದರು. ಆದರೆ, ಅವರು ಐಸ್ಕ್ರೀಂ ತಯಾರು ಮಾಡುತ್ತಿರುವ ವಿಧಾನವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದರಿಂದ ಎಚ್ಚೆತ್ತುಕೊಂಡ ಆಹಾರ ಇಲಾಖೆ ಅಧಿಕಾರಿಗಳು ಮಂಗಳವಾರ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿ ಐಸ್ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ.