ಬೆಂಗಳೂರು :
ನಾನೇ ಕನಕಪುರಕ್ಕೆ ಬಂದು ನಿಮಗೆ ಕೃತಜ್ಞತೆ ಸಲ್ಲಿಸಿ, ಅಭಿನಂದನೆ ಸ್ವೀಕರಿಸುವೆ. ನೀವ್ಯಾರೂ ಬೆಂಗಳೂರಿಗೆ ಬರುವ ತೊಂದರೆ ತೆಗೆದುಕೊಳ್ಳುವುದು ಬೇಡ ಎಂದು ಕನಕಪುರ ಕ್ಷೇತ್ರದ ಅಭಿಮಾನಿಗಳು, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
ದೆಹಲಿ ಪ್ರವಾಸದ ನಂತರ ನಾನೇ ಖುದ್ದಾಗಿ ಕನಕಪುರಕ್ಕೆ ಬರುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಕ್ಷೇತ್ರದ ಜನರಿಗೆ ತೊಂದರೆ ಆಗುವುದು ಬೇಡ ಎಂಬ ಕಾಳಜಿಯಿಂದ ಈ ಮನವಿ ಮಾಡುತಿದ್ದೇನೆ. ಯಾರೂ ಅನ್ಯತಾ ಭಾವಿಸುವುದು ಬೇಡ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.