ಬೆಳಗಾವಿ :
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಕ್ಷೇತ್ರದ ವಿವಿಧೆಡೆ ಪ್ರಚಾರ ಕಾರ್ಯವನ್ನು ಮುಂದುವರಿಸಿದ್ದಾರೆ. ಎಲ್ಲೆಡೆ ನಿರೀಕ್ಷೆಗೂ ಮೀರಿ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ.
ಭಾನುವಾರ ಸಂಜೆ ಸಾಂಬ್ರಾದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ರೋಡ್ ಶೋ ನಡೆಸಿದರು. ಸಾವಿರಾರು ಜನರು ಸ್ವಯಂ ಪ್ರೇರಣೆಯಿಂದ ರೋಡ್ ಶೋದಲ್ಲಿ ಭಾಗವಹಿಸಿದ್ದರು. ಅಲ್ಲದೆ ರಸ್ತೆಯ ಇಕ್ಕೆಲಗಳಲ್ಲೂ ಜನರು ನಿಂತು ಹೂವು, ಮಾಲೆಗಳನ್ನು ಹಾಕುವ ಮೂಲಕ ಶುಭ ಕೋರಿದರು.
ಸಾಂಬ್ರಾದ ಗಲ್ಲಿ ಗಲ್ಲಿಗಳಲ್ಲಿ ರೋಡ್ ಶೋ ನಡೆಸಲಾಯಿತು. ಇಡೀ ಗ್ರಾಮದಲ್ಲಿ ಜಾತ್ರೆಯ ಸ್ವರೂಪದಲ್ಲಿ ಜನರು ಸೇರಿ ಲಕ್ಷ್ಮೀ ಹೆಬ್ಬಾಳಕರ್ ಅವರ ಗೆಲುವಿನ ಅಂತರ ಹಿಂದಿನ ಬಾರಿಗಿಂತ ಹೆಚ್ಚಾಗಲಿದೆ ಎನ್ನುವ ವಿಶ್ವಾಸ ಮೂಡಿಸಿದರು. ಹಿರಿಯರು ಕಂಡಲ್ಲೆಲ್ಲ ವಾಹನದಿಂದ ಇಳಿದು ಅವರ ಕಾಲಿಗೆರಗುವ ಮೂಲಕ ಲಕ್ಷ್ಮೀ ಹೆಬ್ಬಾಳಕರ್ ಆಶಿರ್ವಾದ ಪಡೆದರು. ಮಹಿಳೆಯರು ಹತ್ತಿರ ಬಂದು ಅರಿಶಿಣ ಕುಂಕುಮ ನೀಡಿ, ಶುಭ ಕೋರುತ್ತಿದ್ದರು.
ಹಿಂದಿನ ಚುನಾವಣೆ ವೇಳೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇನೆ. ಮನೆ ಮಗಳಂತೆ ನಿಮ್ಮ ಕಷ್ಟ, ಸುಖದಲ್ಲಿ ಜೊತೆಯಾಗಿದ್ದೇನೆ. ಮತ್ತೊಮ್ಮೆ ಆವಕಾಶ ಮಾಡಿಕೊಡಿ. ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸೋಣ. ಶಿಕ್ಷಣ, ಉದ್ಯೋಗ, ಆರೋಗ್ಯ ಸೇವೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ. ಮೇ 10ರಂದು ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ತಪ್ಪದೆ ಮತ ಚಲಾಯಿಸಿ. ಬ್ಯಾಲೆಟ್ ಯುನಿಟ್ ನಲ್ಲಿ 4ನೇ ನಂಬರ್ ನಲ್ಲಿರುವ ನನ್ನ ಹೆಸರಿನ ಮುಂದಿನ ಬಟನ್ ಒತ್ತುವ ಮೂಲಕ ಆಶಿರ್ವಾದ ಮಾಡಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಅಲ್ಲರಲ್ಲೂ ಕೈ ಮುಗಿದು ವಿನಂತಿಸುತ್ತಿದ್ದರು.
ಮಧ್ಯೆ ಮಧ್ಯೆ ಕಾಲ್ನಡಿಗೆಯಲ್ಲೇ ಸಾಗುತ್ತಿದ್ದ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಸ್ಥಳೀಯ ಹಲವಾರು ಮುಖಂಡರು ಸಾಥ್ ನೀಡಿದರು. ಯುವಕರು ಜಯಘೋಷಗಳನ್ನು ಮೊಳಗಿಸುತ್ತಿದ್ದರು. ಲಕ್ಷ್ಮೀ ಅಕ್ಕ ಗೆಲ್ಲೋದು ಪಕ್ಕಾ ಎಂದು ಘೋಷಣೆ ಕೂಗುತ್ತಿದ್ದರು. ಅನೇಕ ಮನೆಗಳ ಮುಂದೆ ರಂಗವಲ್ಲಿಗಳನ್ನು ಹಾಕಿ ಸ್ವಾಗತ ಕೋರುತ್ತಿದ್ದರು. ಯುವತಿಯರು, ಮಹಿಳೆಯರು ಕೈಕುಲುಕಿ ಶುಭಾಷಯ ಹೇಳುತ್ತಿದ್ದರು. ನಿಮ್ಮ ಜೊತೆಗೆ ನಾವಿದ್ದೇವೆ, ಮುಂದೆ ಹೋಗಿ ಎಂದು ಹುರುದುಂಬಿಸಿ ವಿಶ್ವಾಸ ಮೂಡಿಸುತ್ತಿದ್ದರು.
ಹಿಂಡಲಗಾದಲ್ಲಿ ಬೈಕ್ ರ್ಯಾಲಿ
ಹಿಂಡಲಗಾದಲ್ಲಿ ಸೋಮವಾರ ಬೆಳಗ್ಗೆ ಬೃಹತ್ ಬೈಕ್ ರ್ಯಾಲಿ ನಡೆಯಿತು. ನೂರಾರು ಜನರು ರ್ಯಾಲಿಯಲ್ಲಿ ಭಾಗವಹಿಸಿ ಮತ ಯಾಚನೆ ಮಾಡಿದರು. ಶಿವಂ ನಗರದಿಂದ ಆರಂಭವಾದ ಬೈಕ್ ರ್ಯಾಲಿ ವಿಜಯನಗರದವರೆಗೂ ನಡೆಯಿತು.
ಕಳೆದ ಅವಧಿಯಲ್ಲಿ ನೀಡಿದ್ದ ಆಶ್ವಾಸನೆಯಂತೆ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದೇನೆ. ಜನರ ಆಶೋತ್ತರಗಳನ್ನು ಈಡೇರಿಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಯೋಜನೆಗಳನ್ನು ತರುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಜೊತೆಗೆ ಯುವಕರ ಕೈಗೆ ಉದ್ಯೋಗ ಕೊಡುವ ಕೆಲಸ ಮಾಡುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ರ್ಯಾಲಿಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದಲ್ಲದೆ. ರಸ್ತೆಯ ಇಕ್ಕೆಲಗಳನ್ನೂ ನಿಂತ ಜನ ಜೈ ಜೈ ಕಾರ ಘೋಷಣೆಗಳನ್ನು ಕೂಗುತ್ತಿದ್ದರು. ವಿರೋಧಿಗಳೇ ಇಲ್ಲವೇನೋ ಎನ್ನುವ ರೀತಿಯಲ್ಲಿ ಜನರ ಸೇರಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಶುಭ ಕೋರಿದರು.