ಬೆಂಗಳೂರು : ಬಿಗ್ ಬಾಸ್ ಹೀರೋ ಹನುಮಂತ ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳು ಎಷ್ಟು ಗೊತ್ತೇ.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇವರು ಚಿಲ್ಲೂರು ಬಡ್ನಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದರು ಎಂದರೆ ನಂಬಲೇ ಬೇಕು.
ಹನುಮಂತ ಹಾಡುವುದರಲ್ಲಿ ಮಾತ್ರ ಅಲ್ಲ ಓದುವುದರಲ್ಲೂ ಮೇಲುಗೈ ಸಾಧಿಸಿದ್ದಾರೆ. ಹನುಮಂತ ಉನ್ನತ ಮಟ್ಟದ ವಿಧ್ಯಾಭ್ಯಾಸ ಪಡೆಯಲು ಸಾಧ್ಯವಾಗಿಲ್ಲ ನಿಜ. ಆದರೂ ಕೂಡ ಓದಿದಷ್ಟು ಉತ್ತಮ ವಿದ್ಯಾರ್ಥಿ ಅಂತಲೇ ಗುರುತಿಸಿಕೊಂಡಿದ್ದಾರೆ. ಹನುಮಂತ ಹಾಡಿನಲ್ಲಿ ಮಾತ್ರವಲ್ಲ ಶಾಲೆಯಲ್ಲೂ ತುಂಬಾ ಚೆನ್ನಾಗಿ ಓದಿ ಸೈ ಎನಿಸಿಕೊಂಡಿದ್ದಾರೆ.
ಹನುಮಂತ ತನ್ನ ಹುಟ್ಟೂರಿನಲ್ಲೇ ಎಸ್ಎಸ್ಎಲ್ಸಿಯನ್ನು ಮುಗಿಸಿದ್ದಾರೆ. ಹಾವೇರಿಯ ಚಿಲ್ಲೂರು ಬಡ್ನಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಬಾಹ್ಯ ವಿದ್ಯಾರ್ಥಿಯಾಗಿ 2020-21ರ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕಕ್ಕೆ 532 ಅಂಕ ಗಳಿಸಿದ್ದಾರೆ ಹನುಮಂತ. ಇವರ ಓದು, ಕಲಿಕೆ, ಗುಣ ನಡತೆಯ ಬಗ್ಗೆ ಶಾಲೆಯ ಶಿಕ್ಷಕರಿಗೂ ಹೆಮ್ಮೆ ಇದೆ. ಊರಿಗೆ ಬಂದಾಗಲೆಲ್ಲ ಹನುಮಂತ ಅವರು ಶಾಲೆಗೆ ಭೇಟಿ ನೀಡುತ್ತಾರಂತೆ.