ಬೆಂಗಳೂರು :
ಸಿಎಂ ಕಚೇರಿಯ ಸ್ವೀಟ್ ಬಾಕ್ಸ್ ಲಂಚದ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿಯವರೆ, ಲೋಕಾಯುಕ್ತ ತನಿಖೆಗೆ ಸಹಕರಿಸುವಿರಾ ? ಹಣದ ಮೂಲ ಹೇಳುವಿರಾ ?ಯಾವ್ಯಾವ ಪತ್ರಕರ್ತರಿಗೆ ಎಷ್ಟೆಷ್ಟು ಗಿಫ್ಟ್ ನೀಡಿದ್ದೀರಿ ಎಂಬ ಲೆಕ್ಕ ನೀಡುವಿರಾ ?ಯಾರು ಪಡೆದರು, ಯಾರು ವಾಪಸ್ ನೀಡಿದರು ಎಂಬ ಮಾಹಿತಿ ನೀಡುವಿರಾ ?
ಇದು ಇಂದು
ಪತ್ರಕರ್ತರಿಗೆ ಪರೋಕ್ಷ ಲಂಚ ಎಂಬ ಬಗ್ಗೆ ಸರಣಿ ಟ್ವಿಟ್ ಮೂಲಕ ಬಿಜೆಪಿಯನ್ನು ಕಾಂಗ್ರೆಸ್ ಕೆಣಕಿರುವುದು.
ಮುಖ್ಯಮಂತ್ರಿ ಕಚೇರಿಯಿಂದ ದೀಪಾವಳಿ ಪ್ರಯುಕ್ತ ಪತ್ರಕರ್ತರಿಗೆ ಹಬ್ಬದ ನೆಪದಲ್ಲಿ 2.5 ರೂ. ಲಕ್ಷ ಉಡುಗೊರೆ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಸರಣಿ ಟ್ವೀಟ್ ಮೂಲಕ ಬಿಜೆಪಿಯನ್ನು ಕೆಣಕಿದೆ.
40 % ಕಮಿಷನ್ ನಲ್ಲಿ ನೀಡಿದ ಹಣವೇ ?
40 % ಕಮೀಷನ್ ಕರ್ಮಕಾಂಡಗಳನ್ನು ಮುಚ್ಚಿಡಲು ನೀಡಿದ ಲಂಚವೇ ?
ಮಾಧ್ಯಮಗಳನ್ನು ಖರೀದಿಸುವ ವ್ಯವಹಾರವೇ ?
ಸರಕಾರದ ಲಂಚದ ಬಾಕ್ಸ್ ಬೇಡ. ನಮ್ಮ ಲಂಚ್ ಬಾಕ್ಸ್ ಅಷ್ಟೇ ಸಾಕು ಎನ್ನುವ ಪ್ರಾಮಾಣಿಕ ಪತ್ರಕರ್ತರಿಂದ ಸರಕಾರದ ಮಹಾ ಅಕ್ರಮ ಹೊರಬಿದ್ದಿದೆ.
@mla_sudhakar ಅವರೇ ಸ್ಕಾಚ್, ವಾಚ್, ಗೋಲ್ಡ್ ಕಾಯಿನ್ ಅಲ್ಲದೆ ಇನ್ನೂ ಏನೇನಿದೆ ಈ ಬಾಕ್ಸ್ ನಲ್ಲಿ ?
ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂಬ ಮಾತಿದೆ. ಶಾಸಕಾಂಗ, ಕಾರ್ಯಾಂಗವನ್ನು ಖರೀದಿಸಿ ಭ್ರಷ್ಟ ಗೊಳಿಸಿದಂತೆ ಮಾಧ್ಯಮಗಳನ್ನು ಖರೀದಿಸಲು ವಿಫಲ ಯತ್ನ ಮಾಡಿದೆ. ಬೊಮ್ಮಾಯಿಯವರೇ ನಿಮ್ಮ 40 %ಭ್ರಷ್ಟಾಚಾರದ ತುತ್ತ ತುದಿಗೆ ತಲುಪಿರುವುದರಲ್ಲಿ ಇನ್ಯಾವ ಅನುಮಾನವೂ ಉಳಿದಿಲ್ಲ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.