ಬೆಳಗಾವಿ: ನಗರದ ವಿವಿಧ ಠಾಣೆಗಳಲ್ಲಿ ದಾಖಲಾದ ಮನೆಗಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳಿಗೆ ಸಂಬಂದಿಸಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾ ಗ್ ಬೆಳಗಾವಿ ನಗರ, ಸ್ನೇಹ ಪಿ ವಿ ಉಪ-ಪೊಲೀಸ್ ಆಯುಕ್ತರು (ಅ&ಸಂ) ಬೆಳಗಾವಿ ನಗರ, ಮತ್ತು ಹೆಚ್.ಶೇಖರಪ್ಪ ಸಹಾಯಕ ಪೊಲೀಸ್ ಆಯುಕ್ತರು ಖಡೇಬಜಾರ್ ಉಪ-ವಿಭಾಗರವರ ಮಾರ್ಗದರ್ಶನದಲ್ಲಿ ಉದ್ಯಮಬಾಗ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಡಿ. ಕೆ ಪಾಟೀಲ್ ಮತ್ತು ಪಿ. ಎಸ್ ಐ ಕಿರಣ ಸಿ ಹೊನಕಟ್ಟಿ ಅವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಇಬ್ಬರನ್ನು ಬಂಧಿಸಿದೆ.
ಮನೆಕಳ್ಳತನ ಆರೋಪಿತನಾದ ರಫೀಕ್ ಮಹಮ್ಮದ್ ಶೇಖ ಸಾ. ಮಹಾರಾಷ್ಟ್ರ ಹಾಗೂ ಸರಗಳ್ಳತನ ಆರೋಪಿತ ಪ್ರಜ್ವಲ್ ಖಾನಜೆ ಸಾ.ದಾಮಣೆ ಬೆಳಗಾವಿ ಇವರಿಗೆ ಉದ್ಯಮಬಾಗ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 1)49/2023 ಕಲಂ 454, 457,380 ಐ. ಪಿ. ಸಿ 2)04/2024 ಕಲಂ 454,457,380 ಐ. ಪಿ. ಸಿ 3)41/2022 ಕಲಂ 392 ಐ. ಪಿ ಸಿ 4) 57/2022 ಕಲಂ 392 ಐ. ಪಿ ಸಿ 5) 70/2023 ಕಲಂ 392 ಐ ಪಿ. ಸಿ ಹೀಗೆ ಒಟ್ಟು 05 ಪ್ರಕರಣಗಳಲ್ಲಿ ಆರೋಪಿತರನ್ನು ದಸ್ತಗಿರಿ ಮಾಡಿ ಇವರಿಂದ ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಸರಗಳ್ಳತನ ಮಾಡಿದ 10,76,900/- ರೂಪಾಯಿ ಕಿಮ್ಮತ್ತಿನ 148 ತೂಕದ ಬಂಗಾರದ ಆಭರಣಗಳನ್ನು ಹಾಗೂ 3,800/- ರೂಪಾಯಿ ಕಿಮ್ಮತ್ತಿನ 40 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ದಿನಾಂಕ 10/07/2024 ಮತ್ತು 12/07/2024 ರಂದು ಜಪ್ತ ಮಾಡಿ ವಶಕ್ಕೆ ಪಡೆದುಕೊಂಡಿದೆ.
ತನಿಖಾ ತಂಡದಲ್ಲಿ ಉದ್ಯಮಬಾಗ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರಾದ ಡಿ . ಕೆ ಪಾಟೀಲ, ಪಿ.ಎಸ್.ಐ ಕಿರಣ ಸಿ ಹೊನಕಟ್ಟಿ , ಪಿ.ಎಸ್.ಐ ಆರ್.ಪಿ.ಕದಮ , ಸಿ ಎಚ್ ಸಿ ಟಿ. ಬಿ ಕುಂಚನೂರ್, ಸಿಪಿಸಿಗಳಾದ ಭರಮಣ್ಣ ಕರೆಗಾರ, ಜಗದೀಶ ಹಾದಿಮನಿ, ಈರಣ್ಣ ಚವಲಗಿ, ಶಿವಕುಮಾರ್ ಕರ್ಕಿ,ತಾಂತ್ರಿಕ ವಿಭಾಗದ ಸಿಬ್ಬಂದಿವರಾದ ರಮೇಶ್ ಅಕ್ಕಿ, ಮಹದೇವ್ ಕಾಶಿದ್ ರವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಬೆಳಗಾವಿ ನಗರ ಅವರು ಶ್ಲಾಘಿಸಿ ಬಹುಮಾನ ಘೋಷಿಸಿರುತ್ತಾರೆ.