ಬೆಳಗಾವಿ : ಬೆಳಗಾವಿ ನಗರದಲ್ಲಿ ಇಂದು ಯುವಕನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.
ಸ್ಕ್ರೂ ಡ್ರೈವರ್ ನಿಂದ ಇಬ್ರಾಹಿಂ ಗೌಸ್ (22)ಎಂಬ ಯುವಕನನ್ನು ಮಹಾಂತೇಶನಗರ ಸೇತುವೆ ಬಳಿ ಚುಚ್ಚಿ ಕೊಲೆ ಮಾಡಲಾಗಿದೆ. ಕೊಲೆಯಾದ ವ್ಯಕ್ತಿ ಗಾಂಧಿನಗರದ ಯುವತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೊರಟಾಗ ಯುವತಿ ಸಹೋದರ ಗಮನಿಸಿ ಯುವಕನ ಕೊಲೆ ಮಾಡಿದ್ದಾನೆ. ಮುಜಾಮಿಲ್ ಸತಿಗೇರಿ ಎಂಬುವನು ಈ ಕೃತ್ಯ ನಡೆಸಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯಲ್ಲಿ ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ಯುವಕನ ಭೀಕರ ಕೊಲೆ
