ಬೆಳಗಾವಿ : ಬೆಳಗಾವಿ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ10 ಲಕ್ಷ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ 3 ಬೈಕ್ ಮತ್ತು ಒಂದು ಮೊಬೈಲ್ ಫೋನ್ ಸೇರಿದಂತೆ ಒಟ್ಟು ₹ 13,40,000 ಬೆಲೆಯ ಹಣ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಪ್ರಕರಣದ ವಿವರ :
ದಿನಾಂಕ: 24.09.2024 ರಂದು ಫಿರ್ಯಾದಿ ವಿನಾಯಕ ಸುರೇಶ ಕುರಡೆಕರ ಸಾ: ಮಂಗಳವಾರ ಪೇಠ ತಿಲಕವಾಡಿ, ಬೆಳಗಾವಿ ಇವರು ತಮ್ಮ ಪರಿಚಯದ 23 ವರ್ಷದ ವಿದ್ಯಾರ್ಥಿನಿ ಬಸವಣ ಗಲ್ಲಿ ಶಹಾಪುರ ಬೆಳಗಾವಿ ಇವಳು ಮಲಗಿದ್ದಾಗ ಭುಜ ಮುಟ್ಟಿ ಎಬ್ಬಿಸಿದ್ದರ ವಿಡಿಯೋವನ್ನಿಟ್ಟು ಕೊಂಡು ತಮಗೆ ಅಪಹರಣ ಮಾಡಿ ತನ್ನಿಂದ 25 ಲಕ್ಷ ರೂ. ಗೆ ಹಣಕ್ಕೆ ಬೇಡಿಕೆ ಇಟ್ಟು ಈಗಾಗಲೇ ತನ್ನಿಂದ 15 ಲಕ್ಷ ರೂ. ಹಣವನ್ನು ಪಡೆದು ಇನ್ನೂ 10 ಲಕ್ಷ ರೂ. ಕೊಡುವಂತೆ ಆರೋಪಿತರು ಕಿರುಕುಳ ನೀಡುತ್ತಿರುತ್ತಾರೆ ಅಂತ ದೂರು ನೀಡಿದ್ದರು.
ಆ ಬಗ್ಗೆ ಬೆಳಗಾವಿ ನಗರ ಶಹಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣದಲ್ಲಿ ಪತ್ತೆ ಕಾರ್ಯ ಕುರಿತು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ರೋಹನ ಜಗದೀಶ ಮತ್ತು ನಿರಂಜನ ರಾಜ್ ಅರಸ್, ಉಪ-ಪೊಲೀಸ್ ಆಯುಕ್ತರು ಅಪರಾಧ ಮತ್ತು ಸಂಚಾರ ಬೆಳಗಾವಿ ನಗರ, ಸಂತೋಷ ಸತ್ಯನಾಯಿಕ ಸಹಾಯಕ ಪೊಲೀಸ್ ಆಯುಕ್ತರು ಮಾರ್ಕೆಟ್ ಉಪ-ವಿಭಾಗ ಬೆಳಗಾವಿ ನಗರ ಅವರ ಮಾರ್ಗದರ್ಶನದಲ್ಲಿ ಶಹಾಪುರ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಎಸ್ .ಎಸ್. ಸಿಮಾನಿ ಇವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿಯ ತಂಡವು ದಿನಾಂಕ: 25.09.2024 ರಂದು ಆರೋಪಿತರಾದ
1] 23 ವರ್ಷದ ವಿದ್ಯಾರ್ಥಿನಿ, ಬಸವಣ ಗಲ್ಲಿ ಶಹಾಪುರ ಬೆಳಗಾವಿ
2] ಪ್ರಶಾಂತ@ಸ್ಪರ್ಷ ಕಲ್ಲಪ್ಪ ಕೋಲಕಾರ, ವಿದ್ಯಾರ್ಥಿ ವಯಾ: 25 ವರ್ಷ ಸಾ: ಮನಂ 1028 ಗಾಡೆ ಮಾರ್ಗ ಶಹಾಪುರ ಬೆಳಗಾವಿ,
3] ಕುಮಾರ@ ಡಾಲಿ ಅರ್ಜುನ ಗೋಕರಕ್ಕನವರ ವಯಾ: 29 ವರ್ಷ, ಉದ್ಯೋಗ: ಇಲೆಕ್ಟಿಕ್ ಕೆಲಸ ಸಾ: ಜ್ಯೋತಿರ್ಲಿಂಗ ಗಲ್ಲಿ 4ನೇ ಕ್ರಾಸ್ ಕಣಬರಗಿ ಬೆಳಗಾವಿ
4] ರಾಜು ಸಿದ್ರಾಯಿ ಜಡಗಿ ವಯಾ: 29 ವರ್ಷ, ಉದ್ಯೋಗ: ಇಲೆಕ್ಟಿಕ್ ಕೆಲಸ ಸಾ: ವಾಲ್ಮೀಕಿ ಗಲ್ಲಿ ಕಣಬರಗಿ ಬೆಳಗಾವಿ
ಇವರನ್ನು ದಸ್ತಗೀರ ಮಾಡಿ ಅವರ ವಶದಲ್ಲಿಂದ ಪ್ರಕರಣಕ್ಕೆ ಸಂಬಂಧಿಸಿದ 10 ಲಕ್ಷ ರೂ ನಗದು, ಕೃತ್ಯಕ್ಕೆ ಬಳಸಿದ 3 ಮೋಟಾರ್ ಸೈಕಲ್ ಹಾಗೂ ಒಂದು ಮೊಬೈಲ್ ಪೋನ್ ಸೇರಿದಂತೆ ಒಟ್ಟು 13,40,000/- ಕಿಮ್ಮತ್ತಿನ ಹಣ ಹಾಗೂ ಇತರೆ ಮಾಲನ್ನು ವಶಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಲಯಕ್ಕೆ ಹಾಜರಪಡಿಸಿದಂತೆ ಅವರು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ.
ತನಿಖಾ ತಂಡದಲ್ಲಿ ಶಹಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಸ್ ಎಸ್ ಸಿಮಾನಿ, ಎಎಸ್ಐ ರವರಾದ ಬಿ ಎ ಚೌಗಲಾ, ಆರ್ ಆಯ್ ಸನದಿ ಸಿಹೆಚ್ಸಿ ರವರುಗಳಾದ ನಾಗರಾಜ ಓಸಪ್ಪಗೋಳ, ಶಿವಶಂಕರ ಗುಡದೈಗೋಳ, ಸಿಪಿಸಿ ಶ್ರೀಧರ ತಳವಾರ, ಜಗದೀಶ ಹಾದಿಮನಿ, ಸಂದೀಪ ಬಾಗಡಿ, ಸಿದ್ದರಾಮೇಶ್ವರ ಮುಗಳಖೋಡ, ವಿಜಯ ಕಮತೆ, ಮಹಿಳಾ ಸಿಬ್ಬಂದಿಗಳಾದ ಕಾವೇರಿ ಕಾಂಬಳೆ, ಪ್ರತಿಭಾ ಕಾಂಬಳೆ ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಬೆಳಗಾವಿ ನಗರ ಅವರು ಶ್ಲಾಘಿಸಿರುತ್ತಾರೆ.