ಅಧಿವೇಶನದಲ್ಲಿ ಕಪ್ಪು ಚುಕ್ಕೆ ತರುವ ಪ್ರತಿಭಟನೆಗಳಿಗೆ ಬ್ರೇಕ್..!
ನೈಜ ಸಮಸ್ಯೆ ಇದ್ದವರಿಗೆ ಮಾತ್ರ ಪ್ರತಿಭಟನೆಗೆ ಅವಕಾಶ; ಗೃಹ ಸಚಿವ ಜಿ ಪರಮೇಶ್ವರ..!
ಬೆಳಗಾವಿ: ಸುವರ್ಣ ಸೌಧದಲ್ಲಿ ಡಿಸೆಂಬರ್ 4 ರಿಂದ 15 ರವರೆಗೆ ನಡೆಯಲಿರುವ ಚಳಿಗಾಲ ಅಧಿವೇಶನದ ಸಮಯದಲ್ಲಿ ನೈಜ ಸಮಸ್ಯೆ ಇದ್ದವರಿಗೆ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಿ, ಅಧಿವೇಶನಕ್ಕೆ ಕಪ್ಪು ಚುಕ್ಕೆ ತರುವ ಪ್ರತಿಭಟನೆಗಳಿಗೆ ಬ್ರೇಕ್ ಹಾಕಲಾಗುವುದಾಗಿ ಗೃಹ ಸಚಿವ ಜಿ ಪರಮೇಶ್ವರ ಹೇಳಿದರು.
ಇಂದು ಬೆಳಗಾವಿ ಎಸ್ ಪಿ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಪತ್ರಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿ ಹೇಳಿದ ಅವರು ನೈಜ ಸಮಸ್ಯೆ ಇದ್ದವರ ಬಗ್ಗೆ ಪೊಲೀಸ್ ಹಾಗೂ ಇತರೇ ಇಲಾಖೆಯವರು ಕೂಲಂಕಷವಾಗಿ ಪರಿಶೀಲನೆ ನಡೆಸಿ ನಂತರ ಪ್ರತಿಭಟನೆಗೆ ಅನುಮತಿ ನೀಡಲಿದ್ದಾರೆ.
ಅಧಿವೇಶನ ಸಮಯದಲ್ಲಿ ಹೆಚ್ಚುವರಿಯಾಗಿ 3500 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲಾಗಿದೆ ಎಂದರು.
ವಸತಿ ಹಾಗೂ ಇತರೇ ವ್ಯವಸ್ಥೆಗಾಗಿ ಇಲಾಖೆ ಕೇಳಿದ ಹಣ ಬಿಡಗಡೆ ಮಾಡಲಾಗಿದೆ ಎಂದರು.
ಇಂದು ಬೆಳಗಾವಿ ನಗರ ಮತ್ತು ಗ್ರಮೀಣ ಪ್ರದೇಶದಲ್ಲಿನ ಪೊಲೀಸ್ ಠಾಣೆಗಳನ್ನು ಪರಿಶೀಲನೆ ಮಾಡಿದರು. ಕಳೆದ ಬಾರಿಗಿಂತ ಈ ಬಾರಿ ಅಪರಾಧ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಟ್ರಾಫಿಕ್ ವ್ಯವಸ್ಥೆಯಲ್ಲಿ ಸುಧಾರಣೆ ಆಗಿದೆ ಎಂದರು.
ಈ ವರ್ಷ ಅಪಘಾತದಲ್ಲಿ 2500 ಜನ ಅಪಘಾತಕ್ಕಿಡಾಗಿದ್ದು, 550 ಸಾವನಪ್ಪಿದ್ದಾರೆ. ಅಪಘಾತ ಸಂಭವಿಸುವ ಬ್ಲ್ಯಾಕ್ ಸ್ಪಾಟಗಳಲ್ಲಿ ಮುಂಬರುವ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.
ನಗರ ಮತ್ತು ಗ್ರಾಮೀಣದಲ್ಲಿ ಹೆಚ್ಚಾಗಿ ವಯಕ್ತಿಕ ಕಾರಣಕ್ಕಾಗಿ ಕೊಲೆಗಳಾಗಿದ್ದು, ಇತರೆ ಇಲಾಖೆಗಳೊಂದಿಗೆ ಸೇರಿ ಅವುಗಳನ್ನು ಹತೋಟಿಗೆ ತರುವ ಪ್ರಯತ್ನ ನಡೆದಿದೆ.
15 ವರ್ಷ ಮೆಲ್ಪಟ್ಟ ಸುಮಾರು 1700 ವಾಹನಗಳನ್ನು ಕಂಡೆಮ್ನ ಮಾಡಿಲಾಗಿದೆ. ಅವುಗಳ ಬದಲಿಗಾಗಿ 150 ಕೋಟಿ ಹಣ ಬಿಡುಗಡೆ ಮಾಡಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬೆಳಗಾವಿ ನಗರ ಕಮೀಷನರ್ ಸಿದ್ದರಾಮಪ್ಪ, SP ಭೀಮಾಶಂಕರ ಗುಳೇದ, DCP ರೋಹನ್ ಜಗದೀಶ್ , ಸ್ನೆಹಾ ಪಿವಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.