ಹೊಸ ವಂಟಮೂರಿಯಲ್ಲಿ ಮಹಿಳೆ ಬೆತ್ತಲೆ ಪ್ರಕರಣ ಘಟನೆ ಸ್ಥಳಕ್ಕೆ ಗೃಹ ಸಚಿವರ ಭೇಟಿ..!
ಮಹಿಳೆಯ ಮಾನ ಕಾಪಾಡಿದ್ದು PSI ಎಂದು ಬಹಿರಂಗವಾಗಿ ಹೇಳಿದ ಗೃಹ ಸಚಿವರು..!
ಬೆಜವಾಬ್ದಾರಿ ಪೊಸ್ ಪೊಲೀಸಪ್ಪನ ವಿರುದ್ಧ ಆಗುತ್ತಾ ಕ್ರಮ ..?
ಬೆಳಗಾವಿ : ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ನಿನ್ನೆ ಮಧ್ಯರಾತ್ರಿ ಮಗಳು ಪ್ರಿಯಕರನೊಂದಿಗೆ ಪರಾರಿಯಾಗಿದ್ದಕ್ಕೆ ರಾತೋರಾತ್ರಿ ಪ್ರೀಯಕರನ ಮನೆಗೆ ನುಗ್ಗಿ, ಅವನ ತಾಯಿಯೊಂದಿಗೆ ದೌರ್ಜನ್ಯ ನಡೆಸಿ ಆಕೆಯನ್ನು ಬೆತ್ತಲಾಗಿಸಿ ನಡು ಬಿದಿಯಲ್ಲಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ ದುಷ್ಟ ಕ್ರೌರ್ಯ ಮೆರೆದಿರುವ ಘಟನೆ ಅಧಿವೇಶನ ಸಮಯದಲ್ಲಿ ನಡೆದಿದ್ದು, ಸ್ವತಃ ಗೃಹ ಸಚಿವ ಜಿ ಪರಮೇಶ್ವರ್ ಆಸ್ಪತ್ರೆಯಲ್ಲಿರುವ ನೊಂದ ಮಹಿಳೆ ಕಮಲವ್ವಾ ಲಗಮಪ್ಪಾ ಗಡಕರಿಗೆ ಭೆಟ್ಟಿ ಮಾಡಿ ಘಟನೆ ಸ್ಥಳಕ್ಕೆ ಭೇಟಿ ನೀಡಿದರು.
ಈ ಘಟನೆ ಕುರಿತು ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು
ನಿನ್ನೆ ರಾತ್ರಿ 12.30ರ ಸುಮಾರಿನಲ್ಲಿ ಅಮಾನವೀಯ ಘಟನೆ ನಡೆದಿದೆ.
ದುಂಡಪ್ಪ 24 ವರ್ಷದ ಯುವಕರ 18 ವರ್ಷದ ಯುತಿಯನ್ನು ಪ್ರೀತಿಸಿದವರು ಓಡಿಹೋಗಿದ್ದಾರೆ.
ಬಳಿಕ ಸಂಬಂಧಿಕರು 10-15 ಜನ ಮನೆಗೆ ಹೋಗಿ ಧ್ವಂಸ ಮಾಡಿದ್ದಾರೆ. ಮಹಿಳೆಯನ್ನು ಬೆತ್ತೆಲೆ ಮಾಡಿ ಎಳೆದು ತಂದು ಹಲ್ಲೆ ಮಾಡಿದ್ದಾರೆ.
ಕಾಕತಿ PSI ಹಾಗೂ 112 ಸಿಬ್ಬಂದಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಘಟನೆಗೆ ಕಾರಣರಾದ 7 ಜನರನ್ನು ಬಂಧಿಸಲಾಗಿದೆ. ಇದು ಬಹಳ ಅನಿರೀಕ್ಷಿತ ಘಟನೆ.
ಓಡಿ ಹೋದ ಪ್ರೇಮಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ. ಇದು ಯಾರಿಗು ಗೌರವ ತರುವಂತ ಕೆಲಸ ಅಲ್ಲ. ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು. ಆಸ್ಪತ್ರೆ ಹಾಗೂ ಗ್ರಾಮಕ್ಕೂ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಕಮಲಮ್ಮ ಮಾನಸಿಕವಾಗಿ ನೊಂದಿದ್ದಾಳೆ.
ನಗ್ನ ಮಾಡಿ ಹೊಡೆದ ಬಗ್ಗೆ ದುಖಃ ತೋಡಿಕೊಂಡ್ರು.
ಮಹಿಳಾ ಸಿಬ್ಬಂದಿ ಮೂಲಕ ಕೌನ್ಸಲಿಂಗ್ ಮಾಡಲಾವುದು.
ಮುಂದೆ ಯಾವುದೇ ಈ ರೀತಿಯ ಘಟನೆ ಆಗದಂತೆ ಕ್ರಮ ಕೈಕೊಂಡು ಊರಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡ್ತಿವಿ.ಈ ರೀತಿಯ ಪ್ರಕರಣ ಬಹಳ ದುರದೃಷ್ಟಕರ.
ಕಾನೂನಿನ ಪ್ರಕಾರ ಕ್ರಮ ವಹಿಸಲಾಗುವುದು ಎಂದರು.
ಕಾಕತಿ ಪೊಲೀಸಪ್ಪನ ಬೆಜವಾಬ್ದಾರಿ ಬಯಲು.
ಈ ದೌರ್ಜನ್ಯಕ್ಕೊಳಗಾದ ಮಹಿಳೆಯನ್ನು ಕಾಪಾಡಿದ್ದು ಕಾಕತಿ ಪಿಎಸ್ಐ ಹಾಗೂ 112 ಸಿಬ್ಬಂದಿಗಳು ಎಂದು ಸ್ಪಷ್ಟವಾಗಿ ಹೇಳಿದರು. ಇದರಿಂದ ಇಲ್ಲಿ ಕಾಕತಿ ಪಿಐ ಪೊಲೀಸಪ್ಪನ ಬೆಜವಾಬ್ದಾರಿತನ ಬಗ್ಗೆ ಬಹಿರಂಗವಾದಂತಾಗಿದೆ.
ಇಷ್ಟೆಲ್ಲಾ ನಡೆದು ಸತ್ಯ ಹೊರಬಂದ ಮೇಲೆ ಆ ಕಾಕತಿ ಬೆಜವಾಬ್ದಾರಿ ಪೊಲೀಸಪ್ಪನ ಮೇಲೆ ಗೃಹ ಸಚಿವರು, ಹಾಗೂ ಕಮೀಷನರ್ ಕ್ರಮ ಕೈಗೊಳ್ಳುವರೆ ಎಂದು ನೋಡಬೇಕು.