ಬೆಳಗಾವಿ :
ದಿನಾಂಕ : 18/02/2023 ರಂದು ಇಸ್ಮಾಯಿಲ್ ನವಾಸ ತಂದೆ ಕೆ . ಇಬ್ರಾಹಿಮ್ ( 43 ) ಸಾ : ಪಡುಬಿದ್ರಿ , ಉಡುಪಿ ಜಿಲ್ಲೆ ರವರು ತಮ್ಮ ಟ್ರಕ್ ಡ್ರೈವರಗಳಾದ 1 ) ಇಬ್ರಾಹಿಮ್ ಅಲಿ ತಂದೆ ಅಬ್ದುಲ್ಮಜಿದ್ ಹಾಗೂ 2 ) ಸಾಹೇಬ್ ಅಲಿ ಹುಸೇನ್ ಸಾ || ಇಬ್ಬರೂ ಅಸ್ಸಾಂ ರಾಜ್ಯ ಸೇರಿಕೊಂಡು ಮಂಗಳೂರಿನಿಂದ ಅಡುಗೆ ಎಣ್ಣೆಯ ಟನ್ಗಳು ಮತ್ತು ಬಾಕ್ಸ್ಗಳನ್ನು ಬೆಳಗಾವಿ ಮತ್ತು ನಿಪ್ಪಾಣಿ ಕಡೆಗೆ ಸಪ್ಲಾಯಿ ಮಾಡಲು ದಿ : 15/02/2023 ಹೊರಟು ಹಿರೇಬಾಗೇವಾಡಿ ಗ್ರಾಮ ಹದ್ದಿಯ ಬಡೇಕೊಳ್ಳ ಘಾಟದಲ್ಲಿನ ಎನ್ಹೆಚ್ 4 ರಸ್ತೆಯ ಪಕ್ಕದಲ್ಲಿ ಟ್ರಕ್ ನಿಲ್ಲಿಸಿ ಸುಮಾರು 30,38,276 /-ರೂ ಕಿಮ್ಮತ್ತಿನ 1,465 ಅಡುಗೆ ಎಣ್ಣೆಯ ಟನ್ ಮತ್ತು 80 ಪೌಚ್ ಬಾಕ್ಸ್ಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ನೀಡಿದ ದೂರಿನನ್ವಯ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಈ ಪ್ರಕರಣದ ಪತ್ತೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಗೋಪಾಲಕೃಷ್ಣ ಗೌಡರ ಎಸಿಪಿ ಬೆಳಗಾವಿ ( ಗ್ರಾ ) ರವರ ಮಾರ್ಗದರ್ಶನದಲ್ಲಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಪಿಐ ಅಮರೇಶ ಬಿ . ಹಾಗೂ ಸಿಬ್ಬಂದಿಯವರ ತಂಡವು ಕಾರ್ಯಪ್ರವೃತ್ತರಾಗಿ ಇಬ್ಬರೂ ಆರೋಪಿತರನ್ನು ಪತ್ತೆ ಮಾಡಿ , ವಶಕ್ಕೆ ಪಡೆದುಕೊಂಡು ಅವರಿಂದ 23,93,560 / – ರೂಪಾಯಿ ಮೌಲ್ಯದ 878 ಅಡುಗೆ ಎಣ್ಣೆ ಟನ್ಗಳು & 14 ಬಾಕ್ ಎಣ್ಣೆ ಪೌಚ್ಗಳು ಹಾಗೂ ಡಿಯೋ ಮೋಟಾರು 30,000 / – ಹೀಗೆ ಒಟ್ಟು 24,23,560 / – ಮೌಲ್ಯದ ಮಾಲನ್ನು ವಶ ಪಡಿಸಿಕೊಂಡು ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ . ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಶ್ರಮಿಸಿದ ಪಿಐ ಅಮರೇಶ ಬಿ, ಹಾಗೂ ಅವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಬೆಳಗಾವಿ ನಗರ ಮತ್ತು ಡಿಸಿಪಿ ಶ್ಲಾಘಿಸಿರುತ್ತಾರೆ.