ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ವಿವಿಧ ರಾಜ್ಯಗಳ ಅಧ್ಯಕ್ಷರು ಮತ್ತು ರಾಷ್ಟ್ರೀಯ ಅಸೆಂಬ್ಲಿ ಸದಸ್ಯರ ಚುನಾವಣೆಯನ್ನು ಮೇಲ್ವಿಚಾರಣೆ ಮಾಡುವ ಚುನಾವಣಾ ಅಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದೆ. .
ಸಾಂಸ್ಥಿಕ ಚುನಾವಣೆಗಳನ್ನು ಸುಗಮವಾಗಿ ನಡೆಸುವ ಸಲುವಾಗಿ ವಿವಿಧ ರಾಜ್ಯಗಳ ಹಿರಿಯ ನಾಯಕರು ಮತ್ತು ಕೇಂದ್ರ ಸಚಿವರಿಗೆ ಈ ಹೊಣೆಗಾರಿಕೆಯನ್ನು ವಹಿಸಲಾಗಿದೆ. ಕರ್ನಾಟಕಕ್ಕೆ ಕೇಂದ್ರ ಸಚಿವ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ ಅವರನ್ನು ನೇಮಕ ಮಾಡಲಾಗಿದೆ. ಬಿ.ವೈ.ವಿಜಯೇಂದ್ರ ಅವರನ್ನು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಈಗ ಚುನಾವಣೆ ಮೂಲಕ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ.
ವಿವಿಧ ರಾಜ್ಯಗಳಿಗೆ ಪ್ರಮುಖ ನೇಮಕಾತಿಗಳು
ಗುಜರಾತ್: ಕೇಂದ್ರ ಸಚಿವ ಭೂಪೇಂದ್ರ ಯಾದವ್
ಕರ್ನಾಟಕ: ಕೇಂದ್ರ ಸಚಿವ ಶಿವರಾಜ ಸಿಂಗ್ ಚೌಹಾಣ್
ಉತ್ತರ ಪ್ರದೇಶ: ಕೇಂದ್ರ ಸಚಿವ ಪಿಯೂಷ್ ಗೋಯಲ್
ಬಿಹಾರ: ಕೇಂದ್ರ ಸಚಿವ ಮನೋಹರಲಾಲ್ ಖಟ್ಟರ್
ಮಧ್ಯಪ್ರದೇಶ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ರಾಜ್ಯ-ನಿರ್ದಿಷ್ಟ ಜವಾಬ್ದಾರಿಗಳು
ಹಲವು ರಾಜ್ಯಗಳಿಗೆ ಚುನಾವಣಾ ಅಧಿಕಾರಿಗಳ ನೇಮಕ
ಆಂಧ್ರಪ್ರದೇಶ: ಪಿ.ಸಿ. ಮೋಹನ
ಅರುಣಾಚಲ ಪ್ರದೇಶ: ಸರ್ಬಾನಂದ ಸೋನೋವಾಲ್
ಅಸ್ಸಾಂ: ಗಜೇಂದ್ರ ಸಿಂಗ್ ಶೇಖಾವತ್
ಚಂಡೀಗಢ: ಸರ್ದಾರ್ ನರೀಂದರ ಸಿಂಗ್ ರೈನಾ
ಛತ್ತೀಸ್ಗಢ: ವಿನೋದ ತಾವ್ಡೆ
ದಾದ್ರಾ ಮತ್ತು ನಗರ ಹವೇಲಿ-ದಮನ್ ಮತ್ತು ದಿಯು: ಡಾ. ರಾಧಾಮೋಹನ ದಾಸ್ ಅಗರವಾಲ್
ಹರಿಯಾಣ: ಭೂಪೇಂದ್ರ ಯಾದವ್
ಹಿಮಾಚಲ ಪ್ರದೇಶ: ಡಾ. ಜಿತೇಂದ್ರ ಸಿಂಗ್
ಜಮ್ಮು ಮತ್ತು ಕಾಶ್ಮೀರ: ಸಂಜಯ ಭಾಟಿಯಾ
ಕೇರಳ: ಪ್ರಲ್ಹಾದ ಜೋಶಿ
ಲಡಾಖ್: ಜೈರಾಮ ಠಾಕೂರ್
ಲಕ್ಷದ್ವೀಪ: ಪೊನ್ ರಾಧಾಕೃಷ್ಣನ್
ಮೇಘಾಲಯ: ಜಾರ್ಜ್ ಕುರಿಯನ್
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು: ತಮಿಳಿಸೈ ಸೌಂದರರಾಜನ್
ಚುನಾವಣಾ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಇತರ ರಾಜ್ಯಗಳಿಗೂ ನಾಯಕರನ್ನು ನಿಯೋಜಿಸಲಾಗಿದೆ:
ಮಿಜೋರಾಂ: ವನತಿ ಶ್ರೀನಿವಾಸನ್
ನಾಗಾಲ್ಯಾಂಡ್: ವಿ.ಮುರಳೀಧರನ್
ಒಡಿಶಾ: ಸಂಜಯ ಜೈಸ್ವಾಲ್
ಪುದುಚೇರಿ: ತರುಣ ಚುಗ್
ರಾಜಸ್ಥಾನ: ವಿಜಯ ರೂಪಾನಿ
ಸಿಕ್ಕಿಂ: ಕಿರಣ ರಿಜಿಜು
ತಮಿಳುನಾಡು: ಜಿ.ಕಿಶನ್ ರೆಡ್ಡಿ
ತೆಲಂಗಾಣ: ಶೋಭಾ ಕರಂದ್ಲಾಜೆ
ತ್ರಿಪುರ: ಜುಯಲ್ ಓರಮ್
ಬಿಜೆಪಿಯ ಸಂವಿಧಾನದ ಪ್ರಕಾರ, ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯ ಮೊದಲು 50% ರಾಜ್ಯಗಳಲ್ಲಿ ಸಾಂಸ್ಥಿಕ ಚುನಾವಣೆಗಳನ್ನು ನಡೆಸಬೇಕು. ಈ ಪ್ರಕ್ರಿಯೆಯ ಭಾಗವಾಗಿ ಜನವರಿ 15, 2025 ರೊಳಗೆ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ.