ನವದೆಹಲಿ : ಗಣರಾಜ್ಯೋತ್ಸವದ ಮುನ್ನ ದಿನವಾದ ಜನವರಿ 25ರಂದು ಕೇಂದ್ರ ಸರ್ಕಾರ 2026ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪ್ರಕಟಿಸಿದೆ.
ಕರ್ನಾಟಕದ ಮಂಡ್ಯದ ಅಂಕೇಗೌಡ, ಬೆಂಗಳೂರಿನ ಸಮಾಜ ಸೇವಕಿ ಎಸ್.ಜಿ. ಸುಶೀಲಮ್ಮ, ದಾವಣಗೆರೆಯ ಹಿಮೋಫಿಲಿಯಾ ಸೊಸೈಟಿಯ ವೈದ್ಯ ಡಾ ಸುರೇಶ ಹನಗವಾಡಿ ಹಾಗೂ ಸೇರಿದಂತೆ ದೇಶದ 45 ಜನರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
ಈ ವರ್ಷದ ಪದ್ಮ ಪ್ರಶಸ್ತಿಗೆ ಕೇಂದ್ರ ಸರ್ಕಾರವು ಭಾರತದ ಉದ್ದಗಲಕ್ಕೂ ಇರುವ ವಿವಿಧ ರೀತಿಯ ಪ್ರಚಾರವಿಲ್ಲದ ಸಾಧಕರನ್ನು ಗುರುತಿಸಿದೆ.
ಕನ್ನಡ ಜ್ಞಾನ ದಾಸೋಹಿ, ಪುಸ್ತಕ ಭಂಡಾರ ಸೃಷ್ಟಿಸಿದ ಮಂಡ್ಯ ಜಿಲ್ಲೆಯ ಅಂಕೇಗೌಡ ಅವರು ಈ ಬಾರಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂಡ್ಯ ಮೂಲದ ಇವರು 20 ಲಕ್ಷಕ್ಕೂ ಅಧಿಕ ಪುಸ್ತಕ ಸಂಗ್ರಹಿಸುವ ಮೂಲಕ ಗಮನ ಸೆಳೆದಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಒಂದು ಕಾಲದಲ್ಲಿ ಬಸ್ ಕಂಡಕ್ಟರ್ ಆಗಿದ್ದವರು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಅಪರೂಪದ ಗ್ರಂಥಾಲಯ ʼಪುಸ್ತಕ ಮನೆʼ ಸ್ಥಾಪಿಸಿದ್ದಾರೆ. ಇಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳಿವೆ. ಇಲ್ಲಿ ಯಾವುದೇ ಶುಲ್ಕವಿಲ್ಲದೆ ಯಾವ ಪುಸ್ತಕವನ್ನು ಯಾರು ಬೇಕಾದರೂ ಬಂದು ಓದಿಕೊಂಡು ಹೋಗಬಹುದು ಎನ್ನುವುದು ಈ ಗ್ರಂಥಾಲಯದ ವಿಶೇಷ.
ಸಮಾಜ ಸೇವಕಿ ಡಾ. ಎಸ್.ಜಿ. ಸುಶೀಲಮ್ಮ ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಸಂಸ್ಥಾಪಕ ಅಧ್ಯಕ್ಷೆ. ಇವರು 1939 ಮೇ 24ರಂದು ಬೆಂಗಳೂರಿನಲ್ಲಿ ಜನಿಸಿದರು. ಉಚಿತ ಶಾಲೆಗಳು, ಪ್ರಾಥಮಿಕ, ಹೈಸ್ಕೂಲ್ ಸೇರಿದಂತೆ 174 ಅಂಗನವಾಡಿ ತೆರೆದಿದ್ದಾರೆ.
ದಾವಣಗೆರೆ ಜಿಲ್ಲೆಯ ವೈದ್ಯ, ಪ್ರಾಧ್ಯಾಪಕ ಮತ್ತು ಸಮಾಜ ಸೇವಕ ಡಾ. ಸುರೇಶ ಹನಗವಾಡಿ ತೀವ್ರ ಹಿಮೋಫಿಲಿಯಾ (ರಕ್ತಸ್ರಾವ ರೋಗ)ದಿಂದ ಬಳಲುತ್ತಿದ್ದರೂ ಇತರ ರೋಗಿಗಳಿಗೆ ಪ್ರೇರಣೆಯಾಗಿದ್ದಾರೆ. ದಾವಣಗೆರೆಯ ಜೆ.ಜೆ.ಎಂ. ಮೆಡಿಕಲ್ ಕಾಲೇಜಿನಲ್ಲಿ ಪ್ಯಾಥಾಲಜಿ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದ ಮೊಟ್ಟಮೊದಲ ಹಿಮೋಫಿಲಿಯಾ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2026 ಪದ್ಮಶ್ರೀ ಪ್ರಶಸ್ತಿ ಪಡೆದ 45 ಮಂದಿ ಸಂಪೂರ್ಣ ಪಟ್ಟಿ
ಅಂಕೇಗೌಡ – ಕರ್ನಾಟಕ
ಸುರೇಶ ಹನಗವಾಡಿ – ಕರ್ನಾಟಕ
ಎಸ್. ಜಿ. ಸುಶೀಲಮ್ಮ – ಕರ್ನಾಟಕ
ಅರ್ಮಿಡಾ ಫರ್ನಾಂಡಿಸ್ – ಮಹಾರಾಷ್ಟ್ರ
ಭಗವಾನದಾಸ್ ರೈಕ್ವಾರ್ – ಮಧ್ಯಪ್ರದೇಶ
ಭಿಕ್ಲ್ಯಾ ಲಡಕ್ಯಾ ಧಿಂಡಾ – ಮಹಾರಾಷ್ಟ್ರ
ಬ್ರಿಜಲಾಲ ಭಟ್ – ಜಮ್ಮು ಮತ್ತು ಕಾಶ್ಮೀರ
ಬುಧ್ರಿ ಟಾಟಿ – ಛತ್ತೀಸ್ಗಢ
ಚರಣ ಹೆಂಬ್ರಮ್ – ಪಶ್ಚಿಮ ಬಂಗಾಳ
ಚಿರಂಜಿಲಾಲ ಯಾದವ್ – ಛತ್ತೀಸ್ಗಢ
ಧಾರ್ಮಿಕಲಾಲ ಚುನಿಲಾಲ ಪಾಂಡ್ಯ – ಗುಜರಾತ್
ಗಫ್ರುದ್ದೀನ್ ಮೇವಾಟಿ ಜೋಗಿ – ಹರಿಯಾಣ
ಹ್ಯಾಲಿ ವಾರ್ – ಮೇಘಾಲಯ
ಇಂದರ್ಜೀತ ಸಿಂಗ್ ಸಿಧು – ಪಂಜಾಬ್
ಕೆ. ಪಜನಿವೇಲ್ – ಪುದುಚೇರಿ
ಕೈಲಾಶಚಂದ್ರ ಪಂತ – ಉತ್ತರಾಖಂಡ
ಖೇಮರಾಜ ಸುಂದ್ರಿಯಾಲ್ – ಉತ್ತರಾಖಂಡ
ಕೊಲ್ಲಕ್ಕಾಯಿಲ್ ದೇವಕಿ ಅಮ್ಮ ಜಿ – ಕೇರಳ
ಕುಮಾರಸಾಮಿ ತಂಗರಾಜ- ತೆಲಂಗಾಣ
ಮಹೇಂದ್ರಕುಮಾರ ಮಿಶ್ರಾ – ಒಡಿಶಾ
ಮಿರ್ ಹಾಜಿಭಾಯಿ ಕಸಂಭಾಯಿ – ಗುಜರಾತ್
ಮೋಹನ ನಾಗರ – ಉತ್ತರ ಪ್ರದೇಶ
ನರೇಶಚಂದ್ರ ದೇವವರ್ಮಾ – ತ್ರಿಪುರ
ನೀಲೇಶವಿನೋದ್ಚಂದ್ರ ಮಾಂಡ್ಲೆವಾಲಾ – ಗುಜರಾತ್
ನೂರುದ್ದೀನ್ ಅಹ್ಮದ್ – ಅಸ್ಸಾಂ
ಓದುವಾರ್ ತಿರುತಣಿ ಸ್ವಾಮಿನಾಥನ್ – ತಮಿಳುನಾಡು
ಪದ್ಮಾ ಗುರ್ಮೇಟ್ – ಲಡಾಖ್
ಪೋಖಿಲಾ ಲೆಕ್ತೆಪಿ – ಅಸ್ಸಾಂ
ಪುಣ್ಯಮೂರ್ತಿ ನಟೇಸನ್ – ತಮಿಳುನಾಡು
ಆರ್. ಕೃಷ್ಣನ್ – ತಮಿಳುನಾಡು
ರಘುಪತ್ ಸಿಂಗ್ – ರಾಜಸ್ಥಾನ
ರಘುವೀರ ತುಕಾರಾಮ ಖೇಡ್ಕರ್ – ಮಹಾರಾಷ್ಟ್ರ
ರಾಜಸ್ಥಪತಿ ಕಾಳಿಯಪ್ಪ ಗೌಂಡರ್ – ತಮಿಳುನಾಡು
ರಾಮ ರೆಡ್ಡಿ ಮಾಮಿಡಿ – ತೆಲಂಗಾಣ
ರಾಮಚಂದ್ರ ಗೋಡ್ಬೋಲೆ ಮತ್ತು ಸುನೀತಾ ಗೋಡ್ಬೋಲೆ – ಮಹಾರಾಷ್ಟ್ರ
ಸಾಂಗ್ಯುಸಾಂಗ್ ಎಸ್. ಪೊಂಗೆನರ್ – ನಾಗಾಲ್ಯಾಂಡ್
ಶಫಿ ಶೌಕ್ – ಜಮ್ಮು ಮತ್ತು ಕಾಶ್ಮೀರ
ಶ್ರೀರಂಗ ದೇವಬಾ ಲಾಡ್-ಮಹಾರಾಷ್ಟ್ರ
ಶ್ಯಾಮಸುಂದರ- ಬಿಹಾರ
ಸಿಮಾಂಚಲ ಪಾತ್ರೋ – ಒಡಿಶಾ
ಟಗಾ ರಾಮ ಭೀಲ್ – ರಾಜಸ್ಥಾನ
ಟೆಚಿ ಗುಬಿನ್ – ಅರುಣಾಚಲ ಪ್ರದೇಶ
ತಿರುವಾರೂರ್ ಭಕ್ತವತ್ಸಲಂ – ತಮಿಳುನಾಡು
ವಿಶ್ವ ಬಂಧು – ಪಂಜಾಬ್
ಯುಮ್ನಮ್ ಜಾತ್ರಾ ಸಿಂಗ್ – ಮಣಿಪುರ


