ರಾಜ್ಯದಾದ್ಯಂತ ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕಾರಣವನ್ನು ತಡೆಯುವ ಉದ್ದೇಶದಿಂದ ಶ್ರೀರಾಮಸೇನೆ ವತಿಯಿಂದ ಹುಬ್ಬಳ್ಳಿಯನ್ನು ಕೇಂದ್ರೀಕೃತಗೊಳಿಸಿ ಇಂದು ರಾಜ್ಯದ 6 ಕೇಂದ್ರಗಳಲ್ಲಿ ಸಹೋದರಿಯರಿಗಾಗಿ ಸಹಾಯವಾಣಿ ನಂಬರ್ ನ್ನು ಬಿಡುಗಡೆಗೊಳಿಸಲಾಯಿತು.
ಮಂಗಳೂರು, ಉಡುಪಿ, ಹಾಸನ, ಉತ್ತರಕನ್ನಡವನ್ನು ಕೇಂದ್ರವಾಗಿರಿಸಿ, ಮಂಗಳೂರುವಿನ ಆರ್ಯ ಸಮಾಜದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಹಾಯವಾಣಿ (9090443444) ನಂಬರ್ ನ್ನು ಬಿಡುಗಡೆಗೊಳಿಸಲಾಯಿತು
ಪತ್ರಿಕಾಗೋಷ್ಠಿ ಉದ್ದೇಸಿಸಿ ಮಾತನಾಡಿದ ಶ್ರೀರಾಮ ಸೇನೆರಾಜ್ಯ ಪ್ರ. ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ಸಹಾಯವಾಣಿಯ ಕಾರ್ಯವೈಖರಿಯ ಕುರಿತು ವಿವರವಾಗಿ ಮಾಹಿತಿಯನ್ನು ನೀಡಿದರು. ರಾಜ್ಯದೆಲ್ಲೆಡೆ ಎಕಕಾಲದಲ್ಲಿ ಸಹಾಯವಾಣಿಯ ಬಿಡುಗಡೆಯ ಮುಖ್ಯ ಉದ್ದೇಶ ಲವ್ ಜಿಹಾದ್ ಜಾಲದಲ್ಲಿ ಸಿಲುಕಿಕೊಳ್ಳುವ ಹಿಂದೂ ಸಹೋದರಿಯರನ್ನು ನೈತಿಕ ಪೊಲೀಸ್ ಗಿರಿಗೆ ಅವಕಾಶ ಕೊಡದೆ, ಕಾನೂನಾತ್ಮಕವಾಗಿ, ಹಾಗೂ ಕೌನ್ಸಲಿಂಗ್ ಮೂಲಕ ಸಹೋದರಿಯರ ಮನ ಪರಿವರ್ಥಿಸುವುದು ಮುಖ್ಯ ಉದ್ದೇಶವಾಗಿದೆ.
ಈ ಸಹಯವಾಣಿಯಲ್ಲಿ ನುರಿತ ತಜ್ಞರ ತಂಡವು ಒಳಗೊಂಡಿರುದಾಗಿ ಹಾಗೂ ರಾಜ್ಯದಾದ್ಯಂತ 24/7 ಕಾರ್ಯನಿರ್ವಾಹಿಸಲಿದೆ ಎಂದು ಮಾಹಿತಿ ನೀಡಿದರು.. ಸಭೆಯಲ್ಲಿ ಮಂಗಳೂರು ವಿಭಾಗಧ್ಯಕ್ಷ ಮಧುಸೂದನ್ ಉರ್ವಸ್ಟೋರ್, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು, ಹಾಸನ ಜಿಲ್ಲಾಧ್ಯಕ್ಷ ಹೇಮಂತ್ ಜಾನಕೆರೆ, ಮಂಗಳೂರು ಕಾರ್ಯಧ್ಯಕ್ಷ ಅರುಣ್ ಕದ್ರಿ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಪೂಜಾರಿ ಉಪಸಿತರಿದ್ದರು.