ಬೆಂಗಳೂರು :
ಕೃಷಿಗೆ ಸಂಬಂಧಿಸಿದ ಸಲಹೆ, ಮಾರ್ಗದರ್ಶನ, ಪರಿಹಾರೋಪಾಯ ಕಲ್ಪಿಸಲು ಕೃಷಿ ಇಲಾಖೆ ಏಕೀಕೃತ ರೈತ ಕರೆ ಕೇಂದ್ರವನ್ನು ಸ್ಥಾಪಿಸಿದೆ.
ಈ ಸಹಾಯವಾಣಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಸಹಾಯವಾಣಿಯ ಸಂಖ್ಯೆ-1800-425-3553 ಸ್ಥಾಪನೆಯಾಗಿದ್ದು ಎಲ್ಲಾ ಕೃಷಿ ಮಾಹಿತಿ ಪಡೆಯಬಹುದಾಗಿದೆ. ಶೇಷಾದ್ರಿ ರಸ್ತೆ ಕೃಷಿ ಆಯುಕ್ತಾಲಯದಲ್ಲಿ ಈ ನೂತನ ಕರೆ ಕೇಂದ್ರವನ್ನು ಕೃಷಿ ಸಚಿವ ಚೆಲುವರಾಯಸ್ವಾಮಿ ಲೋಕಾರ್ಪಣೆಗೊಳಿಸಿದ್ದಾರೆ.