ಬೆಳಗಾವಿ: ಒಂದು ತಿಂಗಳ ಬಾಣಂತಿ ಹೊರಹಾಕಿ ಫೈನಾನ್ಸ್ ಕಂಪನಿ ಮನೆ ಜಪ್ತಿ ಮಾಡಿದ್ದ ಪ್ರಕರಣ ಇಡೀ ರಾಜ್ಯದಲ್ಲಿ ಸುದ್ದಿ ಮಾಡಿತ್ತು. ಸದ್ಯ ಬಾಣಂತಿ ಹಾಗೂ ಕುಟುಂಬಸ್ಥರು ಮರಳಿ ಮನೆಗೆ ಸೇರಿದ್ದು, ಬಾಣಂತಿ ಕುಟುಂಬಕ್ಕೆ ಸಮಾಜ ಸೇವಕರಿಂದ ಸಹಾಯ ಮಾಡಲಾಗಿದೆ.
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಬಾಣಂತಿ ಮಧು ಬಡಿಗೇರಗೆ ಹಾಗೂ ಕುಟುಂಬಕ್ಕೆ ಸಮಾಜ ಸೇವಕ ಸಂತೋಷ ಗುಬ್ಬಚ್ಚಿ, ತಂಡದಿಂದ 10 ಸಾವಿರ ರೂ ಆರ್ಥಿಕ ಸಹಾಯ ಮಾಡಲಾಗಿದೆ.