ಬೆಳಗಾವಿ:
ಬಿಜೆಪಿ ಹಂಗಿನಿಂದ ಮೊದಲು ಹೊರ ಬರಬೇಕು. ಕಾಂಗ್ರೆಸ್ ಅಥವಾ ಜೆಡಿಎಸ್ ಇರಬಹುದು. ಯಾವ ಪಕ್ಷ ಸೇರಬೇಕು ಎಂಬ ಬಗ್ಗೆ ಇಂದು ಅಥವಾ ನಾಳೆ ಸಂಜೆಯೊಳಗೆ ತೀರ್ಮಾನಕ್ಕೆ ಬರುತ್ತೇನೆ. ಏಪ್ರಿಲ್ 18 ರಂದು ನಾಮಪತ್ರ ಸಲ್ಲಿಸುವೆ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಮ್ಮ ರಾಜೀನಾಮೆ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ತೊರೆಯುವ ತಮ್ಮ ನಿರ್ಧಾರದ ಕುರಿತು ಅವರು ಮಾತನಾಡಿ, ಈ ಬಗ್ಗೆ ಆಪ್ತರೊಂದಿಗೆ ಎಲ್ಲಾ ಸಾಧಕ- ಬಾದಕ ಚರ್ಚಿಸುವೆ. ಮೊದಲು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು. ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ಕೊಡಬೇಕು ಎಂದು ಹೇಳಿದರು.
ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತಮ್ಮ ಚನ್ನರಾಜ ಹಟ್ಟಿಹೊಳಿ ಅವರೊಂದಿಗೆ
ರಾಜೀನಾಮೆ ಪತ್ರದೊಂದಿಗೆ ಲಕ್ಷ್ಮಣ ಸವದಿ ಅವರು ಇದೀಗ ಬೆಳಗಾವಿಯಿಂದ ಬೆಂಗಳೂರು ವಿಮಾನ ಏರಿದ್ದಾರೆ.