ಬೆಳಗಾವಿ: ಸಾರಾಯಿ ಕುಡಿದು ಡ್ರೈವಿಂಗ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಯುವಕನಿಗೆ ಮಾರಣಾಂತಿಕ ಹೊಡೆದ ಘಟನೆ ಬೆಳಕಿಗೆ ಬಂದಿದೆ.
ಅಥಣಿ ತಾಲೂಕು ಮಾಯನಟ್ಟಿ ಗ್ರಾಮದ ಮುರಸಿದ್ದ ಶ್ರೀಶೈಲ ಚೌಗುಲಾ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಗ್ರಾಮದ ಶಿವಪ್ಪ ಎಂಬಾತ ನಾಗನೂರ ಗ್ರಾಮದ ಮುರಸಿದ್ದನನ್ನು ಹಾರೂಗೇರಿ ಬಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸೋಮವಾರ ರಾತ್ರಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಬೆನ್ನು, ಕಾಲಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಲ್ಲೆ ನಡೆಸಿದ ನಂತರ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ.
ಸಂಬಂಧಿಕರಾದ ಸೋಮಲಿಂಗ ವಾಗ್ರೇಯವರ ಗೂಡ್ಸ್ ವಾಹನದಲ್ಲಿ ಮೂರು ವರ್ಷಗಳಿಂದ ಡ್ರೈವರ್ ಆಗಿ ಮುರಸಿದ್ದ ಕೆಲಸ ಮಾಡುತ್ತಿದ್ದ. ಹಾರೂಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .