ಕೊಪ್ಪಳ : ಎಸ್.ಎಸ್.ಎಲ್.ಸಿ ಫಲಿತಾಂಶ ಮೇ 08ರಂದು ಪ್ರಕಟಗೊಂಡಿದ್ದು, ಕೊಪ್ಪಳ ಜಿಲ್ಲೆಯು ಶೇ 90.27ರಷ್ಟು ಸಾಧನೆ ಮಾಡಿ ಎ ಗ್ರೇಡ್ ಸ್ಥಾನ ಪಡೆದಿರುವುದಕ್ಕೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ 2021-22ನೆ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶವು ಶೇ 87 ರಷ್ಟಾಗಿತ್ತು. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ
ಯಲಬುರ್ಗಾ ತಾಲೂಕಿನ ಬಳೂಟಗಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕುಮಾರ್ ಕಾರ್ತಿಕ ಬಿ.ಎನ್ ಎಂಬ ವಿದ್ಯಾರ್ಥಿಯು ಒಟ್ಟು 625ಕ್ಕೆ 623 ಅಂಕಗಳನ್ನು ಪಡೆದು ಕೊಪ್ಪಳ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು ಅಭಿನಂದನಾರ್ಹ ವಿಷಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
*ಈ ಭಾರಿ ಶೇ 3.27ರಷ್ಟು ಫಲಿತಾಂಶ ಹೆಚ್ಚಳ:* 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದ 23,341 ವಿದ್ಯಾರ್ಥಿಗಳಲ್ಲಿ, 21,072 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಭಾರಿ ಶೇ 3.27ರಷ್ಟು ಫಲಿತಾಂಶವು ಹೆಚ್ಚಾಗಿರುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಎ.ರಡ್ಡೇರ್ ಅವರು
ಮಾಹಿತಿ ನೀಡಿದ್ದಾರೆ.