ಬೆಳಗಾವಿ : ದೇವರಾಜ ಅರಸು ಬಡಾವಣೆಯಲ್ಲಿ ಶ್ರೀ ಹನುಮ ಜಯಂತಿಯ ನಿಮಿತ್ತ ಬೆಳಿಗ್ಗೆ 5 ಗಂಟೆಗೆ ಅಭಿಷೇಕ, ಪೂಜೆ, ಭಜನೆ, ಪಲ್ಲಕಿ ಉತ್ಸವ ಪ್ರತಿವರ್ಷದಂತೆ ಬಹಳ ವಿಜೃಂಭಣೆಯಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ದೇವರಾಜ ಅರಸು ಬಡಾವಣೆಯ ಸಮಸ್ತ ನಾಗರಿಕರು ಹಿರಿಯರು, ಕಿರಿಯರು, ಹೆಣ್ಣುಮಕ್ಕಳು ತೊಟ್ಟಿಲು ತೂಗಿ ಹನುಮನ ಆರಾಧನೆ ಮಾಡಿದರು. ಕಾಲೋನಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಹನುಮ ದೇವರ ಪೂಜೆ ಯಶಸ್ವಿಗೊಳಿಸಿದರು.


