ಚ.ಕಿತ್ತೂರು :
ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯ್ತಿ ಆಯೋಜಿಸಿರುವ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನದಡಿ ತಾಲ್ಲೂಕಿನ 17 ಗ್ರಾಮ ಪಂಚಾಯತಿ ಗಳಿಂದ ಸಂಗ್ರಹಿಸಿದ ಮಣ್ಣನ್ನು ‘ಅಮೃತ ಕಳಸ’ದ ಮೂಲಕ ನೆಹರೂ ಯುವ ಕೇಂದ್ರದ ಸ್ವಯಂ ಸೇವಕರಿಗೆ ಇಓ ಸುಭಾಷ್ ಸಂಪಗಾಂವಿ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಅವರು, ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮದಡಿ
ಮಣ್ಣು ಸಂಗ್ರಹ, ಅಮೃತ ಸರೋವರ ದಡದಲ್ಲಿ ಧ್ವಜಾರೋಹಣ, 75 ಸಸಿಗಳನ್ನು ನೆಟ್ಟು ಭೂಮಿ ತಾಯಿಗೆ ಗೌರವ ಸಲ್ಲಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು ಎಂದರು.
ನಂತರ ಪಂಚಪ್ರಾಣ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಇಓ ಸುಭಾಷ ಸಂಪಗಾಂವಿ, ಸಹಾಯಕ ನಿರ್ದೇಶಕ ಸುರೇಶ್ ನಾಗೋಜಿ, ಲಿಂಗರಾಜ ಹಲಕರ್ಣಿಮಠ, ಸಹಾಯಕ ಲೆಕ್ಕಾಧಿಕಾರಿ ಈರಣ್ಣ ಕಮ್ಮಾರ, ತಾ.ಪಂ, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.