ದೆಹಲಿ :
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಗಾಂಧಿ ಕುಟುಂಬದ ಅತ್ಯಂತ ನಿಷ್ಟರಾಗಿರುವ ಖರ್ಗೆ ಕಳೆದ 5 ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡಿಗ ಖರ್ಗೆ ಬಗ್ಗೆ ಸೋನಿಯಾ ಗಾಂಧಿ ಉತ್ತಮ ಅಭಿಪ್ರಾಯ ಹೊಂದಿರುವುದು ಅವರಿಗೆ ಇದೀಗ ಅಧ್ಯಕ್ಷ ಪದ ಒಲಿದು ಬರುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಅವರ ಆಯ್ಕೆಗೆ ಸೋನಿಯಾ ಸಮ್ಮತಿ ಸೂಚಿಸಿದ್ದು ಒಟ್ಟಾರೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದ ಹೆಸರುಗಳಲ್ಲಿ ಇದೀಗ ಖರ್ಗೆ ಅವರ ಹೆಸರಿಗೆ ಅಧಿಕೃತ ಮುದ್ರೆ ಬೀಳಲಿದೆ.
ಖರ್ಗೆ ಈ ಹಿಂದೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿದ್ದರು. ಸದ್ಯ ರಾಜ್ಯಸಭೆಯಲ್ಲೂ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಖರ್ಗೆ ಗುರುತಿಸಿಕೊಂಡಿದ್ದು ಕಲಬುರ್ಗಿಯ ಈ ಕನ್ನಡಿಗನಿಗೆ ಪಕ್ಷದ ಉನ್ನತ ಹುದ್ದೆ ದೊರಕಿದರೆ ಅದೊಂದು ಇತಿಹಾಸವಾಗಲಿದೆ.