ಬೆಳಗ್ಗೆ 7 ರಿಂದ ಸಂಜೆ 6:30 ಎಡಬಿಡದೇ ಓಡಾಟ
ಬೆಳಗಾವಿ :
ಮಹಾಲಕ್ಷ್ಮೀ ದರ್ಶನಕ್ಕೆ ಹೋಗುವ ಭಕ್ತಾದಿಗಳು ಮತ್ತು ಇತರ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಾವಿ-ಕೊಲ್ಲಾಪುರ ನಡುವೆ ತಡೆರಹಿತ(Non Stop) ಬಸ್ ಗಳ ಓಡಾಟ ಆರಂಭಿಸಲಾಗಿದೆ.
ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗಗಳಿಂದ ಒಟ್ಟು 12ತಡೆರಹಿತ ಬಸ್ಸುಗಳು ಮಾರ್ಚ್ 9ರಂದು ಅಂದರೆ ಗುರುವಾರದಿಂದಲೇ ಪ್ರಾರಂಭವಾಗಿವೆ.
ಬೆಳಗ್ಗೆ 7ರಿಂದ ಸಂಜೆ 6:30ರವರೆಗೆ ಪ್ರತಿ ಅರ್ಧ ತಾಸಿಗೊಂದು ಒಟ್ಟು 24ಟ್ರಿಪ್ ಕೊಲ್ಲಾಪುರ- ಬೆಳಗಾವಿ ನಡುವೆ ಬಸ್ ಗಳು ಓಡಾಡಲಿವೆ.
ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಬೆಳಗಾವಿ ವಿಭಾಗದ ಸಾರಿಗೆ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.