ಬೆಳಗಾವಿ : ಐಎಫ್ ಎಸ್ ಅಧಿಕಾರಿ ಗಿರೀಶ ಹೊಸೂರ ಮತ್ತು ಮಿತ್ರರು ತಮಗೆ ಕಲಿಸಿದ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಮಾ.9 ರ ಬೆಳಗ್ಗೆ 11.00 ಕ್ಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಗುರುವಂದನೆಯನ್ನು ಗಿರೀಶ ಚಂ. ಹೊಸೂರ I.F.S ಹಾಗೂ ಆಪ್ತ ಮಿತ್ರರಿಂದ ಆಯೋಜನೆ ಮಾಡಲಾಗಿದೆ.
ಖಾನಾಪುರ ತಾಲೂಕಿನ ಬೀಡಿ ಗ್ರಾಮದ ಎನ್.ಎಂ. ಪ್ರೌಢಶಾಲೆಯ ಮುಖ್ಯ ಗುರುಗಳು, ಹಿರಿಯರು, ಸೇವಾಜೀವಿಗಳಾಗಿದ್ದ ಚಂದ್ರಶೇಖರ ಹೊಸೂರ ಅವರ 30 ನೇ ಪುಣ್ಯಸ್ಮರಣೋತ್ಸವ ಪ್ರಯುಕ್ತ ಈ ಕಾರ್ಯಕ್ರಮ ನಡೆಯಲಿದೆ.
ದಿವ್ಯಸಾನಿಧ್ಯ ಹಾಗು ಲೋಕಾರ್ಪಣೆಯನ್ನು ಜಗದ್ಗುರು ಡಾ. ತೋಂಟದ ಸಿದ್ಧರಾಮ ಸಿದ್ಧರಾಮ ಮಹಾಸ್ವಾಮಿಗಳು ನೆರವೇರಿಸುವರು. ಡಾ ಅಲ್ಲಮಪ್ರಭು ಮಹಾಸ್ವಾಮಿಗಳು ನಾಗನೂರು ರುದ್ರಾಕ್ಷಿಮಠ, ಬೆಳಗಾವಿ,
ರಾಜಗುರು ಸಂಸ್ಥಾನ ಕಲ್ಮಠ, ಚಿನ್ನಮ್ಮನ ಕಿತ್ತೂರ,ಡಾ. ಮಹಾಂತಪ್ರಭು ಮಹಾಸ್ವಾಮಿಗಳು ವಿರಕ್ತಮಠ, ಶೇಗುಣಸಿ ಶ್ರೀ ಚನ್ನಬಸದ ದೇವರು ರುದ್ರಸ್ವಾಮಿಮಠ. ಅವರೊಳ್ಳಿ-ಬೆಳಕಿ ಶ್ರೀ ಗುರುದೇವ ದೇವರು ಪ್ರಭುಲಿಂಗೇಶ್ವರ ಮಠ, ಕಮತೆನಟ್ಟಿ
ಸಾನ್ನಿಧ್ಯ ವಹಿಸುವರು. ಹೋಲಿಕ್ರಾಸ್ ಇಂಗ್ಲಿಷ್ ಮಿಡಿಯಮ್ ಶಾಲೆಯ ಎದುರಿಗೆ ಗುರುಭವನ ರುದ್ರಾಕ್ಷಿಮಠ, ಬೀಡಿ ತಾ. ಖಾನಾಪುರ, ಜಿ. ಬೆಳಗಾವಿ
ಇಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


