This is the title of the web page
This is the title of the web page

Live Stream

March 2023
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಗುಡ್ಡಾಪುರ ದಾನಮ್ಮಳ ಸಾಮಾಜಿಕ ಸೇವೆ ಅನನ್ಯ : ಕಾರಂಜಿ ಶ್ರೀಗಳು Guddapur Danamma's social service is unique: Mr. Karanji


 

ದಾನಮ್ಮದೇವಿ ಮೂರ್ತಿ ಪ್ರತಿಷ್ಠಾಪನೆಯ 38 ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ :
ತನ್ನ ರಚನಾತ್ಮಕವಾದ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯಿಂದ ಬೆಳಗಾವಿಯ ಶಹಾಪುರದ ಜಗಜ್ಯೋತಿ ಬಸವೇಶ್ವರ ಟ್ರಸ್ಟ್ ಬಹುಮೌಲಿಕವಾದ ಸೇವೆಯನ್ನು ಸಲ್ಲಿಸುತ್ತಿದೆ. ಮಹಾ ಶರಣೆ ದಾನಮ್ಮಳ ಧ್ಯೇಯದಂತೆ ಬಡವರ ಅನಾಥರ ಸೇವೆಯನ್ನು ಮಾಡುತ್ತಿದೆ ಎಂದು ಬೆಳಗಾವಿ ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿಯವರು ನುಡಿದರು.

ಶಹಾಪುರದಲ್ಲಿ ಜರುಗಿದ ದಾನಮ್ಮದೇವಿ ಮೂರ್ತಿ ಪ್ರತಿಷ್ಠಾಪನೆಯ 38 ನೇ ವಾರ್ಷಿಕೋತ್ಸವದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಪೂಜ್ಯರು ಆಶೀರ್ವಚನ ನೀಡಿದರು.

12 ನೇ ಶತಮಾನದ ಮಹಾಶರಣೆ ದಾನಮ್ಮ ದೀನದಲಿತರ, ನಿರ್ಗತಿಕರ, ಅನಾಥರ ಸೇವೆಯನ್ನು ಮಾಡುವ ಮೂಲಕ ಸಮಾಜಕ್ಕೆ ಮೌಲಿಕವಾದ ಕೊಡುಗೆಯನ್ನು ನೀಡಿದ್ದಳು. ದಾನ-ದಾಸೋಹದ ಸಿರಿಯಾಗಿ ಬೆಳಗಿದ ದಾನಮ್ಮಳ ಆದರ್ಶಪಥ ಇಂದಿಗೂ ಸಮಾಜದಲ್ಲಿ ಜೀವಂತವಾಗಿ ಉಳಿದಿದೆ. ಈ ನಿಟ್ಟಿನಲ್ಲಿ ಶಹಾಪುರ ಬಸವೇಶ್ವರ ಟ್ರಸ್ಟ್ ಸಮಾಜದಲ್ಲಿ ನೊಂದವರ ಸೇವೆಯನ್ನು ಮಾಡುತ್ತಿರುವುದು ಅಭಿನಂದನಾರ್ಹವೆನಿಸಿದೆ. 38 ವರ್ಷಗಳ ಹಿಂದೆ ಈ ಭಾಗದ ಸಮಾಜಮುಖಿ ಸೇವಕರಾಗಿದ್ದ ಮಹಾದೇವಪ್ಪಣ್ಣ ಕಿತ್ತೂರು, ಸಿದ್ರಾಮಪ್ಪಣ್ಣಾ ಬೆಂಬಳಗಿ, ಉಮದಿ, ಎಸ್.ವ್ಹಿ.ಬಾಗಿ ಅಂತಹ ಅನೇಕರು ಈ ಟ್ರಸ್ಟ್ ಕಟ್ಟಿ ಬೆಳೆಸಿದರು. ಅಂದಿನಿಂದ ಟ್ರಸ್ಟ್ ಅನೇಕ ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಮಾಜಕ್ಕೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗೆ ತನ್ನ ಜನಪರವಾದ ಕಾರ್ಯಗಳನ್ನು ಮುಂದುವರಿಸಲಿ ಎಂದು ಶುಭಕೋರಿದರು.

ಟ್ರಸ್ಟ್ನ ಅಧ್ಯಕ್ಷ ಚಂದ್ರಶೇಖರ ಬೆಂಬಳಗಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ದೂರದ ಗುಡ್ಡಾಪುರಕ್ಕೆ ಸಮಾನಾಂತರವಾಗಿ ದಾನಮ್ಮದೇವಿ ಮಂದಿರವು ಇಲ್ಲಿ ರೂಪಗೊಂಡಿದೆ. ಭಕ್ತರ ಆರಾಧ್ಯಕೇಂದ್ರವೆನಿಸಿದೆ. ಅದರೊಂದಿಗೆ ದಾನಮ್ಮದೇವಿಯ ಆದರ್ಶಪಥದಂತ ಹತ್ತುಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ರಕ್ತದಾನ ಶಿಬಿರಗಳು, ಆರೋಗ್ಯ ತಪಾಸಣಾ ಶಿಬಿರಗಳು, ಜಿಲ್ಲೆಯ ಅಂಗವಿಕಲ, ಅನಾಥಾಶ್ರಮ, ವೃದ್ಧಾಶ್ರಮ, ಬುದ್ಧಿಮಾಂದ್ಯ, ಅಂಧ ಶಾಲಾ ಮಕ್ಕಳು ಮೊಲ್ಗೊಂಡು ಹಲವಾರು ಕೇಂದ್ರಗಳಿಗೆ ಲಕ್ಷಾಂತರ ರೂಪಾಯಿಗಳ ಸಾಮಗ್ರಿಯನ್ನು ಪ್ರತಿವರ್ಷ ವಿತರಿಸುತ್ತಾ ಬಂದಿದೆ. ಇದೊಂದು ಭಕ್ತಿಯ ಸೇವೆಯಾಗಿದ್ದು ಅನೇಕರು ಸಹಾಯ ಸಹಕಾರಗಳನ್ನು ನೀಡುತ್ತಿದ್ದಾರೆ. ಈ ಪವಿತ್ರವಾದ ಸೇವಾಕಾರ್ಯಕ್ಕೆ ಸಮಾಜವು ಸದಾ ಕೈಜೋಡಿಸಲೆಂದು ಹೇಳಿದರು.

ಮಾಧ್ಯಮ ಕ್ಷೇತ್ರದಲ್ಲಿ ಅದ್ವಿತೀಯ ಕೊಡುಗೆ ನೀಡಿದ ಸುನೀತಾ ಬಸವರಾಜ ದೇಸಾಯಿಯವರಿಗೆ ಟ್ರಸ್ಟ್ ಗೌರವಿಸಿ ಸತ್ಕರಿಸಿತು. ಪೂಜ್ಯರು ಹಾಗು ಪದಾಧಿಕಾರಿಗಳು ಜಿಲ್ಲೆಯ ಸುಮಾರು 22 ವಿವಿಧ ಸಂಘಸಂಸ್ಥೆಗಳಿಗೆ ಸಾಮಗ್ರಿಯನ್ನು ವಿತರಿಸಿದರು. ಗುರುಬಸಪ್ಪಣ್ಣಾ ಚೊಣ್ಣದ, ಅರುಣಾ ಬೆಂಬಳಗಿ, ವಿಜಯಲಕ್ಷ್ಮೀ ಉಮದಿ, ಅನಿಲ ಪಾಟೀಲ, ವಿ.ಸಿ.ಬೆಂಬಳಗಿ ವಿವೇಕ ಭೋಜ ಹಾಗೂ ಟ್ರಸ್ಟ್‌ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಾಹೇಶ್ವರ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ವಚನ ಪ್ರಾರ್ಥಿಸಿದರು. ಕಾರ್ಯದರ್ಶಿ ಬಾಬಣ್ಣ ಕಿತ್ತೂರ ವಂದಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು.


Jana Jeevala
the authorJana Jeevala

Leave a Reply