ಮುಖ್ಯಮಂತ್ರಿಗಳಿಂದ ಡಿಜಿಟಲ್ ಸಾಕ್ಷ್ಯಗಳ ನಿರ್ವಹಣೆ ಪುಸ್ತಕ ಬಿಡುಗಡೆ
ಬೆಂಗಳೂರು: ಜಿಎಸ್ಟಿ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಡಿಜಿಟಲ್ ಸಾಕ್ಷ್ಯಗಳ ನಿರ್ವಹಣೆ ಪುಸ್ತಕ ಹಾಗೂ ಮೊಬೈಲ್ ಆ್ಯಪ್ನ್ನು ವಾಣಿಜ್ಯ ತೆರಿಗೆ ಇಲಾಖೆಯ ಆಡಳಿತದಲ್ಲಿ ಬಳಕೆ ಮಾಡುವ ಸಲುವಾಗಿ ಬಿಡುಗಡೆ ಮಾಡಿದರು.ಮುಖ್ಯಮಂತ್ರಿಗಳ ರಾಜಕೀಯ ಕಾಯದರ್ಶಿಗಳಾದ ನಸೆರ್ ಅಹ್ಮದ್, ಗೋವಿಂದರಾಜು, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, .ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ.ಶಿಖಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಿ.ಎಸ್.ಟಿ ದಿನಾಚರಣೆ: 2017 ರ ಜುಲೈ 01 ರಿಂದ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೊಳಿಸಿದ್ದರಿಂದ ಜುಲೈ ಒಂದರಂದು ಜಿಎಸ್ಟಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಹೊಸ ತೆರಿಗೆ ಕಾನೂನಿಗೆ ವರ್ತಕ ಸಮೂಹದಿಂದ ದೊರೆತ ಅನುಪಾಲನೆ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ, ತೆರಿಗೆದಾರರು ನೀಡುತ್ತಿರುವ ದೇಣಿಗೆಯನ್ನು ಗುರುತಿಸಿ, ಪ್ರಶಂಸಿಸುವ ಯೋಜನೆಯಾಗಿಯೂ ಜಿ.ಎಸ್.ಟಿ ದಿನಾಚರಣೆಯ ಧ್ಯೇಯವಾಗಿದೆ.. ಬಾರತದಲ್ಲಿನ ತೆರಿಗೆ ಪದ್ದತಿಯಲ್ಲಿನ ಸರಳೀಕರಣ ಮತ್ತು ಆರ್ಥಿಕ ಬೆಳವಣಿಗೆಗೆ ಒತ್ತು ನೀಡುವುದರ ಮೆರೆಗೆ ಜಿ.ಎಸ್.ಟಿ ಪದ್ದತಿ ಬೀರಿದ ಪರಿಣಾಮವನ್ನು ಈ ಧ್ಯೇಯ ಎತ್ತಿ ತೋರಿಸುತ್ತದೆ. ವ್ಯಾಪಾರ ವಹಿವಾಟುಗಳಲ್ಲಿ ಮತ್ತು ಒಟ್ಟಾರೆ ಆರ್ಥಿಕ ಚಟುವಟಿಕೆಯಲ್ಲಿ ಜಿಎಸ್ಟಿ ತೆರಿಗೆ ಪದ್ದತಿಯು ತಂದುಕೊಟ್ಟಿರುವ ಅನುಕೂಲತೆಗಳನ್ನು ಸ್ಮರಿಉವುದೂ ಕೂಡ ಸಹ ಈ ವರ್ಷದ ಜಿಎಸ್ಟಿ ದಿನಾಚರಣೆಯ ಧ್ಯೇಯವಾಗಿದೆ.
GST Day celebration: CM releases handbook on Handling of Digital Evidences: Chief Minister Siddaramaiah released a handbook on Handling Digital Evidences and a mobile app for use in the administration of the Commercial Tax Department, on the occasion of GST day.
Political Secretaries to CM, Nasir Ahmed and Govindaraju, ACS Finance Department L.K Atheeq, Shikha. C, Commissioner Commercial Taxes Department were present on the occasion.
GST Day:1st July is celebrated as GST Day as the Goods and Services Tax was implemented across the country from 1st July 2017. The mission of GST Day is to recognize and appreciate the compliance of the business community to the new tax law and the contribution of taxpayers to the economic growth of the country. This mission highlights the impact of GST on India’s focus on simplification and economic growth in the taxation system. The purpose of this year’s GST Day celebrations is also to commemorate the benefits that the GST tax regime has brought to business transactions and overall economic activity.