ಜನ ಜೀವಾಳ ಜಾಲ : ಅಥಣಿ : ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ರೈತ ಭೂಮಿಯ ಫಲವತ್ತೆತೆ ಕಾಯ್ದು ಕೊಂಡು ರಸಾಯನಿಕ ಮುಕ್ತ ಬೆಳೆ ಬೆಳೆದಾಗ ಮಾತ್ರ ಅದು ಸಾಧ್ಯವಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಪರಿಷತ್ತಿನ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.
ಅವರು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಛೇರಿ(ಕೆ ಆರ್ ಐ ಡಿ ಎಲ್), ಶ್ರೀ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಲಯ ಮೂರು ಹೊಸ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ರೈತ ಆರ್ಥಿಕವಾಗಿ ಸಶಕ್ತನಾಗ ಬೇಕೆಂದು ಯೋಚಿಸುವುದರಲ್ಲಿ ತಪ್ಪಿಲ್ಲ. ಆದರೆ ಭೂಮಿಯ ಮೇಲೆ ಹೆಚ್ಚಿನ ಅತಿಯಾದ ರಸಾಯನಿಕ ಬಳಕೆಯಿಂದ ರೋಗಗೃಸ್ಥನಾಗುತ್ತಿದ್ದು ಇವು ಮಾರಕ ರೋಗಗಳಾದ ಕ್ಯಾನ್ಸರ್, ಹೃದಯಾಘಾತದಿಂದ ಸಾವು ತಂದು ಕೊಳ್ಳುತ್ತಿದ್ದಾರೆ,ಮುಂಬರುವ ದಿನಗಳು ಇನ್ನು ಭಯಾನಕ ಆಗುವುದಕಿಂತ ಮೊದಲು ಎಚ್ಚೆತ್ತು ಕೊಳ್ಳುವುದು ಅವಶ್ಯಕತೆ ಇದೆ,ಈ ಎಲ್ಲ ಮುಂದಾಲೋಚನೆಯಿಂದಲೇ ಗ್ರಾಮೀಣ ಭಾಗದ ರೈತನ ಮಕ್ಕಳು ಸಹ ಉನ್ನತ ವಿದ್ಯಾಭ್ಯಾಸ ಹೊಂದಬೇಕೆಂಬ ಉದ್ದೇಶದಿಂದ ಕೃಷಿ ವಿಶ್ವ ವಿದ್ಯಾಲಯ ಮತ್ತು ಪಶುವೈದ್ಯಕೀಯ ಕಾಲೇಜ್ ಸ್ಥಾಪನೆ ಮಾಡಲಾಗಿದ್ದು ಮುಂಬರುವ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಗುವುದು. ವಿಶೇಷವಾಗಿ ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆಯಾಗಬೇಕಾದ ಕಾಲೇಜುಗಳನ್ನು ನನ್ನ ಕ್ಷೇತ್ರಕ್ಕೆ ತಂದ ಹೆಮ್ಮೆ ನನಗಿದೆ ಎಂದರು.
ಹೆಣ್ಣು ಮಕ್ಜಳು ಕೂಡಾ ಉನ್ನತ ವಿದ್ಯಾಭ್ಯಾಸ ಹೊಂದುವುದು ಅವಶ್ಯ. ಅವರ ಅನುಕೂಲಕ್ಕಾಗಿ ವಸತಿಗೃಹ ನಿರ್ಮಿಸಲಾಗಿದೆ.ರಾಜ್ಯ ಸರಕಾರದ ವಿದ್ಯಾಶ್ರೀ ಯೋಜನೆಯ ಲಾಭ ಪಡೆದವರಲ್ಲಿ ನಮ್ಮ ಜಿಲ್ಲೆಯವರೆ ಹೆಚ್ಚು ಎಂದು ಹೇಳಿದರು.
ತಹಶೀಲ್ದಾರ ಸುರೇಶ ಮುಂಜೆ,ಉಪ ಕೃಷಿ ನಿರ್ದೇಶಕ ಎಲ್.ಐ. ರೂಡಗಿ,ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ್,ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ.ವೀರಣ್ಣ ವಾಲಿ, ಮೋಹನ ಕುಮಾರ,ಎ ಬಿ ಷಣ್ಮುಖ ಪ್ಪ,ಗುರಪ್ಪ ದಾಷ್ಯಾಣ,ಬಾಬು ಗಲಗಲಿ,ದಿಲೀಪ್ ಲೋಣಾರಿ,ದತ್ತಾ ವಾಷ್ಟರ,ಕಲ್ಮೇಶ ಮಡ್ಡಿ,ಮಲ್ಲು ಹುದ್ದಾರ,ರವಿ ಬಂಗಾರಿ ಸೇರಿದಂತೆ ರೈತ ಮುಖಂಡರು ಇದ್ದರು.