ಬೆಂಗಳೂರು :
ವೇತನ ಸಂಬಂಧ ಮುಷ್ಕರ ನಡೆಸುತ್ತಿರುವ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತ್ರತ್ವದ ರಾಜ್ಯ ಸರಕಾರ ಇದೀಗ ಮೂಲವೇತನದಲ್ಲಿ ಶೇಕಡಾ 17ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದೆ.
ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ಈ ಆದೇಶ ಜಾರಿಯಲ್ಲಿ ಜಾರಿಯಾಗಲಿದೆ. ಮುಷ್ಕರ ನಿರತ ನೌಕರರು ತಕ್ಷಣ ಪ್ರತಿಭಟನೆ ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಮುಷ್ಕರ ಕೊನೆಗೂ ಅಂತ್ಯ : ರಾಜ್ಯ ಸರಕಾರ ವೇತನ ಹೆಚ್ಚಳ ಮಾಡಿರುವುದನ್ನು ಸ್ವಾಗತಿಸಿರುವ ರಾಜ್ಯ ಸರಕಾರಿ ನೌಕರರ ಸಂಘ ತಾನು ಹಮ್ಮಿಕೊಂಡ ಮುಷ್ಕರವನ್ನು ಅಂತ್ಯಗೊಳಿಸಿದೆ. ನಾಳೆಯಿಂದ ಮತ್ತೆ ಕೆಲಸಕ್ಕೆ ಹಾಜರಾಗುವುದಾಗಿ ನೌಕರರ ಸಂಘಟನೆ ಸ್ಪಷ್ಟಪಡಿಸಿದೆ.