ಜನ ಜೀವಾಳ ಜಾಲ: ಬೆಳಗಾವಿ:ಸರಕಾರಿ ಕಚೇರಿಗಳು ಬೆಳಗಾವಿ ಜಿಲ್ಲೆಯಲ್ಲಿ ಖಾಸಗಿಯವರಿಗೆ ಮಾರಾಟಕ್ಕಿವೆ…!
ಹೀಗೊಂದು ಭಾಸ ಮೂಡುವ ಚಿತ್ರ ನಿಮ್ಮನ್ನೆಲ್ಲ ಅಪ್ಪಳಿಸಿದೆ. ಸರಕಾರಿ ಕಚೇರಿ ಮತ್ತು ಅಧಿಕಾರಿಗೆ ನೀಡಲಾದ ವಾಹನ ಮತ್ತು ಇತರ ಸೌಕರ್ಯಗಳನ್ನು ಖಾಸಗಿ ಇಲ್ಲವೇ ರಾಜಕೀಯ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಬಳಕೆ ಮಾಡುವ ಪ್ರಮೇಯವಿಲ್ಲ. ಈ ನಡುವೆ ಯೂನಿಫಾರ್ಮ್ ಇಲಾಖೆಯ PSI ಒಬ್ಬ ತನ್ನ ಕಚೇರಿಯ ಅಧಿಕೃತ ಕುರ್ಚಿಯನ್ನು ಸ್ವಾಮೀಜಿ ಒಬ್ಬರಿಗೆ ಬಿಟ್ಟುಕೊಟ್ಟು ತಾನು ಮುಂದೆ ಕೈಕಟ್ಟಿ ಕುಳಿತುರುವ ದೃಶ್ಯ ಅಸಹ್ಯ ಮೂಡಿಸಿದೆ.
ಸರಕಾರಕ್ಕಿಂತ ದೊಡ್ಡವನು ಜಗತ್ತಿನಲ್ಲಿ ಮತ್ತೊಬ್ಬ ಇರುವುದಿಲ್ಲ. ಸರಕಾರಿ ಅಧಿಕಾರಿ, ಶಾಸಕ ಇಲ್ಲವೇ ಮಂತ್ರಿ ವೈಯಕ್ತಿಕವಾಗಿ ಯಾರಿಗಾದೂ ನಮಸ್ಕಾರ ಶಿರಸಾಷ್ಟಾಂಗ ಹೊಡೆಯಬಹುದು. ಆದರೆ ಅವರನ್ನು ಸರಕಾರಿ ಕಚೇರಿಯ ಅಧಿಕೃತ ಕುರ್ಚಿ ಮೇಲೆ ಕೂಡ್ರಿಸುವುದು ಎಂದರೆ ಏನು. ಸರಕಾರಿ ಕುರ್ಚಿ ಮೇಕೆ ಕೂಡುವುದೆಂದರೆ ಕಾನೂನಿನ ಅಧಿಕಾರ ಹೊಂದಿದವರಿಗೆ ಮಾತ್ರ ಸಾಧ್ಯ. ಆದರೆ ಈಗ ಖಾಸಗಿ, ವ್ಯಕ್ತಿಗಳು ಹಾಗೂ ಸಾಧು ಸಂತರು ಕೂಡ್ರುವುದೇ?
ಇಙತಹ ವಿಲಕ್ಷಣ ಘಟನೆ ಕುಡಚಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಠಾಣೆಯ ಪಿಎಸ್ ಐ ಮಾಳಪ್ಪ ಪೂಜಾರಿ ಎಂಬುವವರು ಈ ಕೃತ್ಯ ನಡೆಸಿ ಗಮನ ಸೆಳೆದಿದ್ದಾರೆ. ಜಾತಿ- ಧಾರ್ಮಿಕತೆ, ವೈಯಕ್ತಿಕ ಅಭಿಮಾನ ಅನುರಾಗದ ಆಧಾರದ ಮೇಲೆ ಸರಕಾರಿ ಕಚೇರಿಯಲ್ಲಿ ತಿಳಿದದ್ದು ಮಾಡಲು ಅವಕಾಶವಿದೆಯೇ, ಎಸ್ಪಿ ಡಾ. ಭೀಮಾಶಂಕರ ಉತ್ತರ ಕಂಡುಕೊಳ್ಳಬೇಕಿದೆ.