ಬೆಳಗಾವಿ : ವಿಶ್ವ ಹಿಂದೂ ಪರಿಷದ್ ಬೆಳಗಾವಿ ವತಿಯಿಂದ ಜ. 11 ರಿಂದ 22 ರ ವರೆಗೆ ಅಯೋಧ್ಯೆಯ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯ ವಾರ್ಷಿಕೋತ್ಸವದ ನಿಮಿತ್ತ ಪ್ರತಿದಿನ ಸಂಜೆ 7.30 ರಿಂದ 8.30 ರ ವರೆಗೆ 11 ಸಲ ಹನುಮಾನ ಛಾಲೀಸಾ ಪಠಣ ಭಕ್ತಿ ಯಜ್ಞ ಶಾಸ್ತ್ರಿನಗರ ಗೂಡ್ಸ್ ಶೆಡ್ ರಸ್ತೆಯ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದ ಸಮರಸತಾ ಭವನದಲ್ಲಿ ನಡೆಯುತ್ತಿದೆ. ಜ.18 ರಂದು ಸಂಜೆ ಈ ಭಕ್ತಿಯಜ್ಞದಲ್ಲಿ ಅಯೋಧ್ಯೆಯ ಪ್ರಭು ಶ್ರೀ ರಾಮಚಂದ್ರ ಮಂದಿರದ ಉಸ್ತುವಾರಿ ಗೋಪಾಲಜೀ ಭಾಗಿಯಾಗಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಕಟಣೆ ತಿಳಿಸಿದೆ.
ಬೆಳಗಾವಿಗೆ ಶನಿವಾರ ಗೋಪಾಲಜೀ
