ಎಸ್ ಬಿ ಐ ಗ್ರಾಹಕರಿಗೆ ಸಿಹಿಸುದ್ದಿ : ಎಫ್ ಡಿ ಮೇಲಿನ ಬಡ್ಡಿ ದರ ಹೆಚ್ಚಳ
ದೆಹಲಿ:
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಫಿಕ್ಸಿಡ್ ಡೆಪಾಸಿಟ್ ಹೂಡಿಕೆದಾರರಿಗೆ ಸಿಹಿಸುದ್ದಿ ನೀಡಿದೆ.
ಎಸ್ಬಿಐ ಡಿಸೆಂಬರ್ 27 ರಿಂದ ಜಾರಿಗೆ ಬರುವಂತೆ ನಿಶ್ಚಿತ ಠೇವಣಿಗಳ(ಎಫ್ಡಿ) ಮೇಲಿ ಬಡ್ಡಿದರಗಳನ್ನು 50 ಬಿಪಿಎಸ್ ಏರಿಕೆ ಮಾಡಿದೆ.
ಎರಡು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್ಡಿ ಮೇಲೆ ಬಡ್ಡಿದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಎಸ್ಬಿಐ ವೆಬ್ಸೈಟ್ನ ಪ್ರಕಾರ, ’46 ದಿನಗಳಿಂದ 179 ದಿನಗಳು’, ‘211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ’ ಮತ್ತು ‘3 ವರ್ಷಗಳಿಂದ 5 ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್ಡಿ ಮೇಲೆ 25 ಮೂಲಾಂಕ ಬಡ್ಡಿದರ ಹೆಚ್ಚಿಸಲಾಗಿದೆ.
‘7 ದಿನಗಳಿಂದ 45 ದಿನಗಳು’ ಮತ್ತು ‘180 ದಿನಗಳಿಂದ 210 ದಿನಗಳು’ ಅವಧಿಯ ಎಫ್ಡಿ ದರಗಳನ್ನು 50 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಲಾಗಿದೆ. ಎಸ್ಬಿಐ ಏಳರಿಂದ 45 ದಿನಗಳಲ್ಲಿ ಮೆಚ್ಯೂರ್ ಆಗುವ ಎಫ್ಡಿ ಮೇಲಿನ ದರಗಳನ್ನು 50 ಬೇಸಿಸ್ ಪಾಯಿಂಟ್ಗಳಷ್ಟು (ಬಿಪಿಎಸ್) ಹೆಚ್ಚಿಸಿದೆ.
ಆದರೆ ‘1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ’, ‘2 ವರ್ಷದಿಂದ 3 ವರ್ಷಗಳಿಗಿಂತ ಕಡಿಮೆ’ ಮತ್ತು ‘5 ವರ್ಷಗಳು ಮತ್ತು 10 ವರ್ಷಗಳವರೆಗೆ’ ಅವಧಿಯ ಎಫ್ಡಿ ದರಗಳನ್ನು ಬದಲಾಗದೆ ಇರಿಸಲಾಗಿದೆ.
ಎಸ್ಬಿಐ ನೂತನ ಬಡ್ಡಿದರ
7 ದಿನಗಳಿಂದ 45 ದಿನಗಳು: ಸಾಮಾನ್ಯ ಜನರಿಗೆ ಶೇಕಡ 3.5, ಹಿರಿಯ ನಾಗರಿಕರಿಗೆ ಶೇಕಡ 4.00 ಬಡ್ಡಿದರ
46 ದಿನಗಳಿಂದ 179 ದಿನಗಳು: ಸಾಮಾನ್ಯ ಜನರಿಗೆ ಶೇಕಡ 4.75, ಹಿರಿಯ ನಾಗರಿಕರಿಗೆ ಶೇಕಡ 5.25 ಬಡ್ಡಿದರ
180 ದಿನಗಳಿಂದ 210 ದಿನಗಳು: ಸಾಮಾನ್ಯ ಜನರಿಗೆ ಶೇಕಡ 5.75, ಹಿರಿಯ ನಾಗರಿಕರಿಗೆ ಶೇಕಡ 6.25 ಬಡ್ಡಿದರ
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿ: ಸಾಮಾನ್ಯ ಜನರಿಗೆ ಶೇಕಡ 6, ಹಿರಿಯ ನಾಗರಿಕರಿಗೆ ಶೇಕಡ 6.50 ಬಡ್ಡಿದರ
1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿ: ಸಾಮಾನ್ಯ ಜನರಿಗೆ ಶೇಕಡ 6.80, ಹಿರಿಯ ನಾಗರಿಕರಿಗೆ ಶೇಕಡ 7.30 ಬಡ್ಡಿದರ
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿ: ಸಾಮಾನ್ಯ ಜನರಿಗೆ ಶೇಕಡ 7.00, ಹಿರಿಯ ನಾಗರಿಕರಿಗೆ ಶೇಕಡ 7.50 ಬಡ್ಡಿದರ
3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿ: ಸಾಮಾನ್ಯ ಜನರಿಗೆ ಶೇಕಡ 6.50, ಹಿರಿಯ ನಾಗರಿಕರಿಗೆ ಶೇಕಡ 7.00 ಬಡ್ಡಿದರ
5 ವರ್ಷದಿಂದ 10 ವರ್ಷಗಳವರೆಗೆ ಅವಧಿ: ಸಾಮಾನ್ಯ ಜನರಿಗೆ ಶೇಕಡ 6.50, ಹಿರಿಯ ನಾಗರಿಕರಿಗೆ ಶೇಕಡ 7.50 ಬಡ್ಡಿದರ ನೀಡಲಾಗುತ್ತದೆ.