ಬೆಂಗಳೂರು :
ತಮ್ಮ ಹುಟ್ಟುಹಬ್ಬ ದಿನ ಕುಟುಂಬದವರಿಗೆ ಸಮಯ ನೀಡಲಾಗದೆ ಪರದಾಡುತ್ತಿದ್ದ ಪೊಲೀಸರಿಗೆ ಇದೀಗ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ ಶುಭಸುದ್ದಿ ನೀಡಿದ್ದಾರೆ.
ಸದ್ಯಕ್ಕೆ ಇದು ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ.
ಇನ್ನು ಮುಂದೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಒಂದು ದಿನ ರಜೆ ನೀಡುವ ನಿರ್ಧಾರಕ್ಕೆ ಬೆಂಗಳೂರು ಆಯುಕ್ತರು ಬಂದಿದ್ದು ಆಗಸ್ಟ್ 1 ರಿಂದ ಇದು ಜಾರಿಗೆ ಬರಲಿದೆ.
ಬೆಂಗಳೂರಿನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜನ್ಮದಿನಕ್ಕೆ ಶುಭಾಶಯ ಪತ್ರ ಜೊತೆ ಒಂದು ದಿನ ರಜೆ ನೀಡಲು ಪೊಲೀಸ್ ಆಯುಕ್ತ ದಯಾನಂದ ನಿರ್ಧರಿಸಿದ್ದು ಈಗಾಗಲೇ ತಿಂಗಳುವಾರು ಪೊಲೀಸರ ಜನ್ಮ ದಿನಾಚರಣೆ ಪಟ್ಟಿಯನ್ನು ಸಹ ಆಯುಕ್ತರ ಕಚೇರಿ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ.