ಕಾರವಾರ: ಉತ್ತರ ಪ್ರದೇಶದಲ್ಲಿ ಕಾಶಿ ಕಾರಿಡಾರ್, ರಾಮ ಮಂದಿರ ನಿರ್ಮಾ ಣದಂತೆ ಶಿವನ ಆತ್ಮಲಿಂಗ ಇರುವ ಗೋಕರ್ಣವನ್ನು ಅದೇ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. ಐಎನ್ಎಸ್ ಕೌಂಡಿನ್ಯ ನೌಕೆ ಉದ್ಘಾಟನೆಗಾಗಿ ಇತ್ತೀಚೆಗೆ ಕದಂಬ ನೌಕಾಲೆಗೆ ಭೇಟಿ ನೀಡಿದ್ದ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರು ಗೋಕರ್ಣ ಅಭಿವೃ ದ್ಧಿಗೆ ವಿಸ್ತ್ರತ ಯೋಜನೆ ರೂಪಿಸಿ ಸಲ್ಲಿಸು ವಂತೆ ಪ್ರವಾಸೋದ್ಯಮ ಇಲಾಖೆ ಅಧಿ ಕಾರಿಗಳಿಗೆ ಸೂಚಿಸಿದ್ದರು.
ಅದರಂತೆ ಗೋಕರ್ಣವನ್ನು ಯಾವ ರೀತಿ ಅಭಿ ವೃದ್ಧಿ ಮಾಡಬೇಕು, ಯೋಜನೆಗಳು ಹೇಗಿರಬೇಕು ಎನ್ನುವ ಚರ್ಚೆ, ಸಿದ್ದತೆ ಗಳು ಆರಂಭವಾಗಿದ್ದು, ಯೋಜನೆ ರೂಪುಗೊಳ್ಳಲಿದೆ.