ಬೆಳಗಾವಿ : ಪ್ರಸಿದ್ಧ ದೂದಸಾಗರ ಸೇರಿದಂತೆ ಗೋವಾ ರಾಜ್ಯದ ವಿವಿಧ ಜಲಪಾತಗಳಿಗೆ ಭೇಟಿ ನೀಡಲು ಪ್ರವಾಸಿಗರ ಮೇಲೆ ಹೇರಿದ್ದ ನಿರ್ಬಂಧವನ್ನು ಕೊನೆಗೂ ಗೋವಾ ಅರಣ್ಯ ಇಲಾಖೆ ಸಿಂಪಡೆದಿದೆ. ಮಳೆಯ ಕಾರಣ ಗೋವಾ ರಾಜ್ಯ ಅರಣ್ಯ ಇಲಾಖೆ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರು ತೆರಳುವುದನ್ನು ನಿಷೇಧಿಸಿತ್ತು. ಸದ್ಯ ಮಳೆಯ ಪ್ರಮಾಣ ಕೊಂಚಮಟ್ಟಿಗೆ ಕಡಿಮೆಯಾಗಿರುವುದರಿಂದ ಜಲಪಾತಗಳಲ್ಲಿ ನೀರಿನ ರಭಸ ಇಲ್ಲ. ಹೀಗಾಗಿ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಆದರೆ, ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ ಸುಪ್ರಸಿದ್ಧ ಬೆಳಗಾವಿಗೆ ಹೊಂದಿಕೊಂಡಿರುವ ದೂದಸಾಗರ ಜಲಪಾತ ವೀಕ್ಷಣೆಗೂ ಸಹಾ ತೆರಳಲು ಪ್ರವಾಸಿಗರಿಗೆ ಅನುಮತಿ ಲಭ್ಯವಾದಂತಾಗಿದೆ.
ದೂದಸಾಗರ ಸೇರಿದಂತೆ ವಿವಿಧ ಜಲಪಾತ ವೀಕ್ಷಣೆಗೆ ಪ್ರವಾಸಿಗರ ನಿರ್ಬಂಧ ಹಿಂಪಡೆದ ಗೋವಾ
