ಬೆಳಗಾವಿ :
ಮಹಿಳೆಯರು ಸಂಘಟನೆಗಳ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಕಿಶೋರ ಶ್ರೇಕರ ಹೇಳಿದರು.
ಬೆಳಗಾವಿಯ ವಡಗಾವಿಯ ಡೋರಗಲ್ಲಿಯಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಕಕ್ಕಯ್ಯ ಹಿಂದೂ ಡೋಹರ ಸಮಾಜ ಮಹಿಳಾ ಮಂಡಳದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರು ಸಂಘಟಿತರಾಗಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರೆ ಆರ್ಥಿಕವಾಗಿ ಸಬಲರಾಗಬಹುದು. ಸಮಾಜಕ್ಕ ತಮ್ಮದೆಯಾದ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಹಿಳೆಯರಿಗೆ ವಿಶೇಷ ತರಬೇತಿ ನೀಡುವುದರ ಕುರಿತು ಮತ್ತು ಸಮಾಜದ ಅಭಿವೃದ್ಧಿಯ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿರಿಯ ಮಹಿಳಾಮಣಿಗಳನ್ನು ಗುಲಾಬಿ ಗಿಡಗಳನ್ನು ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು. ವಿಠ್ಠಲ ಪೋಳ, ಚಂದ್ರಕಾಂತ ಕದಂ, ಪ್ರಭಾಕರ ಫೋಳ, ಸುಭಾಷ ನಾರಾಯಣಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಹಿಳಾ ಸಂಘದ ಅಧ್ಯಕ್ಷೆ ಅಶ್ವಿನಿ ಶ್ರೇಕರ್ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿದ್ದರು. ಉಪಾಧ್ಯಕ್ಷೆ ರೇಣುಕಾ ಹೊಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸ್ನೇಹಾ ಕದಂ ಪರಿಚಯಿಸಿದರು. ಉಪಕಾರ್ಯದರ್ಶಿ ರೇಖಾ ವಂದಿಸಿದರು.