ಜನ ಜೀವಾಳ ಜಾಲ: ಬೆಳಗಾವಿ: ಬಸವೇಶ್ವರ ಕೋ ಆಪರೇಟಿವ್ ಬ್ಯಾಂಕನ ನೂತನ ಅಧ್ಯಕ್ಷರಾಗಿ ಬಸವರಾಜ ಉಪ್ಪಿನ, ಗಿರೀಶ ಬಾಗಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ನೂತನವಾಗಿ ಆಯ್ಕೆಯಾದ ಬ್ಯಾಂಕಿನ ಪದಾಧಿಕಾರಿಗಳನ್ನು ಬ್ಯಾಂಕಿನ ನಿರ್ದೇಶಕರುಗಳಾದ ಬಿ ಬಿ ಕಗ್ಗಣಗಿ, ಆರ್.ಎಂ.ಕಳಸಣ್ಣವರ,ಪಿ.ಎಮ್.ಬಾಳೇಕುಂದ್ರಿ, ಆರ್.ಎಸ್.ಸಿದ್ದಣ್ಣವರ,ಬಿ.ವಿ. ಜೊಂಡ, ಸರಳಾ ಎಸ್. ಹೇರೆಕರ, ಡಿ.ಎಂ.ಕುಡಚಿ, ಎಸ್.ಕೆ.ಪಾಟೀಲ, ಸಿ.ಎಚ್. ಕಟ್ಟಿಮನಿ ನಿರ್ದೇಶಕರಾದ ಸಿ.ಎ. ಹಿರೇಮಠ ಹಾಗೂ ಜನರಲ್ ಮ್ಯಾನೇಜರ ಎಸ್.ಎಸ್ ವಾಲಿ,ಜನರಲ್ ಮ್ಯಾನೇಜರ ಬಿ.ಜಿ ನ್ಯಾಮಗೌಡ ಮತ್ತು ಎ.ಡಿ.ಎಮ್ ಮ್ಯಾನೇಜರ ಸಿ.ಎಸ್.ಶೆಟ್ಟಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಬಾಳಪ್ಪಾ ಬಿ ಕಗ್ಗಣಗಿ ಮಾತನಾಡಿ ಈ ಹಿಂದಿನ ಅಧ್ಯಕ್ಷ ಬಸವರಾಜ ಜೊಂಡ ಮತ್ತು ಉಪಾಧ್ಯಕ್ಷೆ ಶ್ರೀಮತಿ ದೀಪಾ ಕುಡಚಿ ನಿರ್ದೇಶಕ ಮಂಡಳಿ ಸಹಾಯ ಸಹಕಾರದೊಂದಿಗೆ ಉತ್ತಮ ಆಡಳಿತವನ್ನು ನೀಡಿದ್ದು ಅವರ ಅಧಿಕಾರಾವಧಿಯಲ್ಲಿ 2022-23ನೇ ಸಾಲಿಗೆ ಬ್ಯಾಂಕು 1.40 ಕೋಟಿಯಷ್ಟು ಲಾಭಗಳಿಸಿದ್ದಲ್ಲದೆ ಎನ್.ಪಿ.ಎ.ಪ್ರತಿಶತ ಪ್ರಮಾಣವು ಒಟ್ಟು ಸಾಲ ಬಾಕಿಗೆ 0.98ಕ್ಕೆ ಇಳಿಕೆಯಾದದ್ದನ್ನು ಪ್ರಶಂಸಿದರು ಹಾಗೂ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಅಭಿನಂದಿಸಿ ಅವರ ಅಧಿಕಾರಾವಧಿಯಲ್ಲಿ ಬ್ಯಾಂಕು ಇನ್ನೂ ಹೆಚ್ಚು ಲಾಭ ಗಳಿಸಿ ಉತ್ತಮ ಪ್ರಗತಿ ಹೊಂದಲೆಂದು ಆಶಿಸಿದರು.
ನಿರ್ದೆಶಕರಾದ ರಮೇಶ ಕಳಸಣ್ಣವರ ಮಾತನಾಡಿ ಬರುವ ದಿನಮಾನಗಳಲ್ಲಿ ಸಂಸ್ಥೆಯನ್ನು ಇನ್ನೂ ಉತ್ತಮ ರೀತಿಯಲ್ಲಿ ಕೊಂಡೊಯ್ಯುವರೆಂದು ಆಶಯವನ್ನು ವ್ಯಕ್ತಪಡಿಸಿ ಎಲ್ಲ ನಿರ್ದೇಶಕ ಮಂಡಳಿಯವರು ತಮ್ಮ ಸಂಪೂರ್ಣ ಸಹಾಯ ಮತ್ತು ಸಹಕಾರದ ಭರವಸೆಯನ್ನು ನೀಡಿದರು. ಆದರಂತೆ, ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳು ಮಾತನಾಡಿ ಸಂಸ್ಥೆಯ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿ ಮಂಡಳಿಯ ಎಲ್ಲ ಸದಸ್ಯರ ಸಹಕಾರದೊಂದಿಗೆ ಪಾರದರ್ಶಕ ಆಡಳಿತವನ್ನು ನೀಡುವುದಾಗಿ ಭರವಸೆ ನೀಡಿದರು. ತಮ್ಮನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಉಪಸ್ಥಿತ ಎಲ್ಲ ನಿರ್ದೇಶಕರುಗಳಿಗೆ ಕೃತಜ್ಞತೆ ಸಲ್ಲಿಸಿದರು. ಸಭೆಯ ಕೊನೆಗೆ ಡೆಪ್ಯುಟಿ ಜನರಲ್ ಮ್ಯಾನೇಜರರಾದ ಶ್ರೀ ಬಿ.ಜೆ.ನ್ಯಾಮಗೌಡ ಇವರಿಂದ ವಂದನಾರ್ಪಣೆಯೊಂದಿಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡಿತು. ಚುನಾವಣಾ ಪ್ರಕ್ರಿಯೆಯನ್ನು ಶ್ರೀ ಜಿ ಎಸ್ ಪಾಟೀಲ ಸಹಕಾರ ಸಂಘಗಳ ಹಿರಿಯ ನಿರೀಕ್ಷಕರು ನಡೆಸಿದರು.