ಕಾರವಾರ : ಕಾರವಾರ ತಾಲೂಕಿನ ಶಿರವಾಡ ಗ್ರಾಪಂ ವ್ಯಾಪ್ತಿಯ ಕೋಣಮಕ್ಕಿಯ ನಿವಾಸಿ ಗಿರಿಯಾ ಗೌಡಾ (83)ಸೋಮವಾರ ನಿಧನರಾದರು.
1966 ರಲ್ಲಿ ಅರಣ್ಯ ಇಲಾಖೆಯಲ್ಲಿ ತಾತ್ಕಾಲಿಕ ಸೇವೆಗೆ ಸೇರಿದ್ದ ಇವರು 1975 ರಲ್ಲಿ ಅರಣ್ಯ ರಕ್ಷಕರಾಗಿ (guard) ಖಾಯಂ ಹುದ್ದೆಗೆ ನೇಮಕಗೊಂಡರು. ಶೇಜವಾಡ, ಗೋಪಶಿಟ್ಟ, ಜೋಯಿಡ, ಶಿರೂರು ಹಾಗೂ ಹಟ್ಟಿಕೇರಿ ಯಲ್ಲಿ ಕರ್ತವ್ಯ ನಿರ್ವಹಿಸಿ 25 ವರ್ಷಗಳ ಸೇವೆಗೆ ಸಲ್ಲಿಸಿ 2000 ರಲ್ಲಿ ನಿವೃತ್ತಿಯಾದರು.
ನಿವೃತ್ತಿಯ ಬಳಿಕ ಊರಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಇತ್ತೀಚಿಗೆ ಕೆಲವು ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಸೋಮವಾರ ಬೆಳಗಿನ ಜಾವ ವಿಧಿವಶರಾದರು.
ಅವರಿಗೆ ಪತ್ನಿ, ಪುತ್ರ ಇದ್ದಾರೆ.
ಗಿರಿಯಾ ಗೌಡಾ ನಿಧನ
