ಬೆಳಗಾವಿ: ಬೆಳಗಾವಿಯಲ್ಲಿ ಶನಿವಾರದಿಂದ ಆರಂಭವಾಗಲಿರುವ 29 ನೇ ಕರ್ನಾಟಕ ರಾಜ್ಯ ಸ್ಕೌಟ್ಸ್- ಗೈಡ್ಸ್ ಜಾಂಬೋರೇಟ್ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದೆ. ಮಾಜಿ ಸಚಿವ ಮತ್ತು ಭಾರತ ಸ್ಕೌಟ್ಸ್- ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಅವರು ಬೆಳಗಾವಿ ತಾಲೂಕು ಹೊನಗಾ ಗ್ರಾಮದ ಫಿನಿಕ್ಸ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಡಿ. 27 ರಿಂದ ಜ.1 ರ ವರೆಗೆ ನಡೆಯಲಿರುವ 29 ನೇ ಕರ್ನಾಟಕ ರಾಜ್ಯ ಸ್ಕೌಟ್ಸ್-ಗೈಡ್ಸ್ ಜಾಂಬೋರೇಟ್ ಪರಿಶೀಲನಾ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದರು. ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಅಭೂತಪೂರ್ವ ಕಾರ್ಯಕ್ರಮ ಹೊಸ ಇತಿಹಾಸ ಬರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಯಾವೆಲ್ಲ ತಯಾರಿ ನಡೆಯಬೇಕೋ ಅವುಗಳನ್ನು ಅತ್ಯಂತ ಅಚ್ಚುಕಟ್ಟು ಹಾಗೂ ಯಶಸ್ವಿಯಾಗಿ ಕೈಗೊಳ್ಳಬೇಕು. ನಾಡಿನ ಮೂಲೆ ಮೂಲೆಗಳಿಂದ ಸ್ಕೌಟ್ಸ್ ವಿದ್ಯಾರ್ಥಿಗಳು ಹಾಗೂ ಗೈಡ್ಸ್ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಮಕ್ಕಳ ಪಾಲಿಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಅವರ ಜೀವನದ ಅವಿಸ್ಮರಣೀಯ ಕ್ಷಣವಾಗಬೇಕು ನಿಟ್ಟಿನಲ್ಲಿ. ಈ ಕಾರ್ಯಕ್ರಮ ನಡೆಯುವಂತಾಗಬೇಕು ಎಂದು ಅವರು ತಿಳಿಸಿದರು.
ಪ್ರತಿಯೊಂದು ಕ್ಯಾಂಪಿಗೂ ಸ್ವತಃ ಭೇಟಿ ನೀಡಿದ ಅವರು, ಪೂರಕ ಮಾಹಿತಿಗಳನ್ನು ಪಡೆದುಕೊಂಡು ಅಮೂಲ್ಯ ಸೂಚನೆಗಳನ್ನು ನೀಡಿದರು.
ಭಾರತ ಸ್ಕೌಟ್ಸ್ – ಗೈಡ್ಸ್ ಉಪಾಧ್ಯಕ್ಷ ಮತ್ತು ಜಿಲ್ಲಾ ಮುಖ್ಯ ಆಯುಕ್ತ ಗಜಾನನ ಮಣ್ಣಿಕೇರಿ ಅವರು ಕಾರ್ಯಕ್ರಮಕ್ಕೆ ಅಗತ್ಯವಾದ ಎಲ್ಲಾ ತಯಾರಿ ಈಗಾಗಲೇ ಮಾಡಲಾಗಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ನವ ಇತಿಹಾಸ ಬರೆಯಲಿದೆ ಎಂದು ತಿಳಿಸಿದರು.
ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಪುಷ್ಪಾರ್ಚಣೆ ಮಾಡಿದರು.
ಶಿಕ್ಷಣ ಇಲಾಖೆಯ ಅಧಿಕಾರಿ ಹಾಗೂ ಸ್ಥಾನಿಕ ಆಯುಕ್ತ ರಾಜಶೇಖರ ಚಳಗೇರಿ,ಎ.ಆರ್.ಅಂಬಗಿ, ಎನ್.ಆರ್.ಮೆಳವಂಕಿ,ಎಂ.ಎಂ.ಪಾಟೀಲ, ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೆ.ಆಂಜನೇಯ, ಭಾರತ ಸ್ಕೌಟ್ಸ್ ಗೈಡ್ಸ್ ರಾಜ್ಯ ಸಹಾಯಕ ಆಯುಕ್ತೆ ಪ್ರಭಾವತಿ ಪಾಟೀಲ, ರಾಜ್ಯ ಕೋಶಾಧಿಕಾರಿ ಟಿ. ಪ್ರಭಾಕರ, ಡಿಒಟಿ ರಾಜಕುಮಾರ ಕುಂಬಾರ, ನಾಗೇಶ ಶಿವಾಪುರ, ವಿಠ್ಠಲ ಎಸ್, ಹನುಮಂತ ಭಜಂತ್ರಿ ಹಾಗೂ ಕರ್ನಾಟಕ ರಾಜ್ಯ ಸ್ಕೌಟ್ಸ್ ಗೈಡ್ಸ್ ಪದಾಧಿಕಾರಿಗಳು
ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಸ್ಕೌಟ್ಸ್- ಗೈಡ್ಸ್ ಜಾಂಬೋರೇಟ್ ಗೆ ಸಜಾಗುತ್ತಿದೆ ಬೆಳಗಾವಿ : ಸಿದ್ದತೆ ಪರಿಶೀಲಿಸಿದ ಪಿಜಿಆರ್ ಸಿಂಧ್ಯಾ


