ಬೆಳಗಾವಿ :
ಕೆಲ ದಿನಗಳ ಹಿಂದೆ ಚಾಕೋಲೆಟ್ ನಲ್ಲಿ ಅಮಲು ಬರಿಸಿ ಪ್ರಯಾಣಿಕರಿಗೆ ಪ್ರಜ್ಞೆ ತಪ್ಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ಭೇದಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಬಿಹಾರ್ ಮೂಲದ ಸರ್ತಾಜ್( 29),ಚಂದನ್ ಕುಮಾರ್ (23) ಮತ್ತು ದಾರ ಕುಮಾರ್( 29)ಅವರನ್ನು ಬಂಧಿಸಿದ್ದಾರೆ. ಬೆಳಗಾವಿ- ಗೋವಾ ರೈಲ್ವೆಯಲ್ಲಿ ಪ್ರಯಾಣಿಕರಂತೆ ಕಾಣಿಸಿಕೊಳ್ಳುವ ಇವರು ಇತರ ಪ್ರಯಾಣಿಕರಿಗೆ ಮತ್ತು ಬರಿಸುವ ಚಾಕೊಲೇಟ್ ನೀಡಿ ಅವರು ಪ್ರಜ್ಞೆ ತಪ್ಪಿದಾಗ ಹಣ, ಮೊಬೈಲ್ ಸೇರಿದಂತೆ ಅವರ ಬಳಿ ಇದ್ದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದರು. ಬೆಳಗಾವಿ-ಗೋವಾ ರೈಲ್ವೆಯಲ್ಲಿ ಈ ಗ್ಯಾಂಗ್ ಮಧ್ಯಪ್ರದೇಶದ ಎಂಟು ಜನ ಪ್ರಯಾಣಿಕರಿಗೆ ಮತ್ತು ಬರಿಸುವ ಚಾಕೊಲೇಟ್ ನೀಡಿ ಮೊಬೈಲ್ ಸೇರಿದಂತೆ ಕೆಲವು ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಬೆಳಗಾವಿ ಪೊಲೀಸರು ಗೋವಾ ಪೊಲೀಸರ ಜೊತೆ ಕಾರ್ಯಾಚರಣೆ ನಡೆಸಿದ್ದಾರೆ.