ಬೆಳಗಾವಿ : ಬೆಳಗಾವಿಯ ಕ್ಯಾಂಪ್ ಪೋಲಿಸ್ ಠಾಣೆಗೆ ಮೂವರು ಮಕ್ಕಳು ಮಂಗಳವಾರ ತಮ್ಮ ತಾಯಿಯ ವಿರುದ್ಧ ದೂರು ಸಲ್ಲಿಸಿದ್ದಾರೆ. ತಮ್ಮ ತಾಯಿ ಮನೆ ಬಿಟ್ಟು ಹೋಗಿದ್ದರಿಂದ ಜೀವನ ಕಠಿಣವಾಗಿದೆ. ಅವರನ್ನು ಮರಳಿ ಮನೆಗೆ ಕರೆದು ತರಲು ನೆರವಾಗಿ ಎಂದು ಮಕ್ಕಳು ಪೊಲೀಸರಿಗೆ ದೂರು ನೀಡಿದ್ದಾರೆ. ಕೊನೆಗೂ ಪೊಲೀಸರು ಮಹಿಳೆಯನ್ನು ಕರೆತಂದು ತಾಯಿ ಮಕ್ಕಳ ನಡುವೆ ರಾಜಿಗೆ ಪ್ರಯತ್ನಿಸಿದರು.
ತಾಯಿಯೊಬ್ಬಳು ಹೆತ್ತ ಮಕ್ಕಳನ್ನು ಬಿಟ್ಟು 25 ವರ್ಷದ ಯುವಕನ ಜೊತೆಗೆ ಓಡಿ ಹೋದ ಘಟನೆ ಬೆಳಗಾವಿ ನಗರದ ಗಣೇಶಪುರದಲ್ಲಿ ಬೆಳಕಿಗೆ ಬಂದಿದೆ. ತಾಯಿಯಿಂದಾಗಿ ಮೂರು ಮಕ್ಕಳು ಬೀದಿಗೆ ಬಂದಿದ್ದು, ನ್ಯಾಯ ಕೊಡಿಸುವಂತೆ ಮಕ್ಕಳು ಬೆಳಗಾವಿ ಕ್ಯಾಂಪ್ ಪೊಲೀಸರ ಮೊರೆ ಹೋಗಿದ್ದಾರೆ.
ವಿನಾಯಕ ಕೊಲ್ಕಾರ ಎಂಬ ಯುವಕನ ಜೊತೆಗೆ ಮಹಿಳೆ ಓಡಿ ಹೋಗಿದ್ದಾಳೆ. ಹೆತ್ತ ಮಕ್ಕಳನ್ನು ಬೀದಿಗೆ ಬಿಟ್ಟು ಬೇರೆ ಯುವಕನ ಜೊತೆಗೆ ನೆಲೆಸಿದ್ದಾಳೆ. ಸದ್ಯ ಮೂವರು ಮಕ್ಕಳು ತಾಯಿ ಕಾಣೆಯಾಗಿದ್ದಾಳೆಂದು ಕ್ಯಾಂಪ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸರ್ಕಾರಿ ನೌಕರಿಯಲ್ಲಿದ್ದ ಗಂಡನ ಅಕಾಲಿಕ ನಿಧನದ ಬಳಿಕ ಮಹಿಳೆ ಅನುಕಂಪದ ನೌಕರಿ ಗಿಟ್ಟಿಸಿಕೊಂಡಿದ್ದಳು. ಗಂಡ ತೀರಿ ಹೋದ ಬಳಿಕ 3 ಮಕ್ಕಳು ತಾಯಿ ಆಶ್ರಯದಲ್ಲಿದ್ದ ಬೆಳೆದರು. ಆದರೆ ಕೆಲ ತಿಂಗಳಿಂದ ಮಕ್ಕಳನ್ನು ಬಿಟ್ಟು ಮಹಿಳೆ ಯುವಕನ ಜೊತೆಯಲ್ಲಿ ನೆಲೆಸಿದ್ದಾಳೆ.
ಏನು ತಿಳಿಯದ ಮಕ್ಕಳು ತಾಯಿ ಕಾಣೆಯಾಗಿದ್ದಾಳೆಂದು ಕ್ಯಾಂಪ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಳಿಕ ತಾಯಿ ಬೇರೊಬ್ಬನ ಜೊತೆಗೆ ನೆಲೆಸಿರುವ ವಿಚಾರ ಗೊತ್ತಾಗಿದೆ. ಆತನ ಬಿಟ್ಟು ತಮ್ಮ ಜೊತೆಗೆ ಬರುವಂತೆ ಹಲವು ಬಾರಿ ಮಕ್ಕಳು ಮನವಿ ಮಾಡಿಕೊಂಡಿದ್ದಾರೆ. ನಿಮ್ಮೊಟ್ಟಿಗೆ ಬರಲ್ಲ ಎಂದು ನಲವತ್ತು ವರ್ಷದ ತಾಯಿ ಹೇಳಿದ್ದಾಳೆ.
ತಾಯಿಯ ವರ್ತನೆಗೆ ಬೇಸರಗೊಂಡ 3 ಗಂಡು ಮಕ್ಕಳು ಕ್ಯಾಂಪ್ ಪೊಲೀಸರ ಮೊರೆ ಹೋಗಿದ್ದು, ತಾಯಿಯನ್ನ ತಮ್ಮೊಟ್ಟಿಗೆ ಕಳುಹಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಅತ್ತ ಬಾಡಿಗೆ ಕಟ್ಟದ್ದಕ್ಕೆ ಮನೆ ಮಾಲೀಕರು ಮಕ್ಕಳನ್ನ ಹೊರ ಹಾಕಿದ್ದು, ಸದ್ಯ ಅಜ್ಜಿ ಆಶ್ರಯದಲ್ಲಿ ಬೆಳೆಯುತ್ತಿದ್ದಾರೆ.
ತಾಯಿ ವಾಪಾಸ್ ಬಂದರೆ ತಾವೇ ಶಾಲೆ, ಕಾಲೇಜು ಬಿಟ್ಟು ಕೆಲಸಕ್ಕೆ ಹೋಗಿ ಸಾಕುತ್ತೇವೆ ಅಂತ ಮಕ್ಕಳು ಹೇಳಿದ್ದಾರೆ. ಈ ಕುರಿತು ತಾಯಿಯನ್ನ ಮಾಧ್ಯದವರ ಪ್ರಶ್ನಿಸಿದ್ರೆ ರೋಷಾವೇಶ ತೋರಿಸುತ್ತಿದ್ದು, ಇದು ನಮ್ಮ ವೈಯಕ್ತಿಕ ವಿಚಾರ ನೀವ್ಯಾರು ಹೇಳುತ್ತಿದ್ದಾಳೆ.
ಇನ್ನು ಯುವಕ ವಿನಾಯಕ ಕೊಲ್ಕಾರ ಈ ಮೊದಲು ಮಹಿಳೆಯೋರ್ವಳಿಂದ ಚಪ್ಪಲಿ ಸೇವೆ ಮಾಡಿಸಿಕೊಂಡಿದ್ದನು. ಫೋನ್ ಮಾಡಿ ಮಹಿಳೆಗೆ ಟಾರ್ಚರ್ ನೀಡಿದ್ದ ಎಂಬ ಕಾರಣಕ್ಕೆ ಏಟು ತಿಂದಿದ್ದನು. ಆತನ ಟಾರ್ಚರ್ ಸಹಿಸದೆ ಹುಡುಕಿಕೊಂಡು ಬಂದಿದ್ದ ಮಹಿಳೆ ಬಳಿಕ ಚಪ್ಪಲಿಯಿಂದ ವಿನಾಯಕ ಕೊಲ್ಕಾರಗೆ ಹೊಡೆದಿದ್ದಳು.
ವಿನಾಯಕ ಮಹಿಳೆಗೆ ಕಾಲ್ ಮಾಡಿ ನಿನ್ ಮೇಲೆ ಮನಸಾಗಿದೆ ಐಲವ್ ಯೂ ಎಂದಿದ್ದನಂತೆ. ವಿನಾಯಕನಿಗೆ ಮಹಿಳೆ ಚಪ್ಪಲಿ ಸೇವೆ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಇದೇ ವಿನಾಯಕನ ಮೋಹದ ಬಲೆಗೆ ಮೂರು ಮಕ್ಕಳ ತಾಯಿ ಸಿಲುಕಿಕೊಂಡಿದ್ದಾಳೆ. ತಾಯಿಗಾಗಿ ಮೂವರು ಮಕ್ಕಳು ಹಾಗೂ ಅಜ್ಜಿ ಪರಿತಪಿಸುತ್ತಿದ್ದಾರೆ. ಆದರೆ ಹೆತ್ತ ತಾಯಿಗೆ ಮಕ್ಕಳ ಕೂಗು ಕೇಳಿಸುತ್ತಿಲ್ಲ ಅನ್ನೋದೇ ವಿಪರ್ಯಾಸ.