ಮುಂಬೈ:
ಮುಂಬೈನ ಜನಪ್ರಿಯ ಗಣೇಶ ಮಂಡಳದಲ್ಲಿ ಒಂದಾದ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ) ಸೇವಾ ಮಂಡಲ ಹಬ್ಬದ ಪೂರ್ವಭಾವಿಯಾಗಿ ಸೋಮವಾರ 69 ಕೆಜಿ ಚಿನ್ನ ಮತ್ತು 336 ಕೆಜಿ ಬೆಳ್ಳಿಯಿಂದ ಅಲಂಕರಿಸಲ್ಪಟ್ಟ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿದೆ.
ಈ ವರ್ಷ ಗಣೇಶ ಚತುರ್ಥಿಗೆ ದೇಣಿಗೆಯಾಗಿ 36 ಕೆಜಿ ಬೆಳ್ಳಿ ಹಾಗೂ 250 ಗ್ರಾಂ ಚಿನ್ನದ ಪೆಂಡೆಂಟ್ ಸ್ವೀಕರಿಸಿದ್ದೇವೆ ಮತ್ತು ಇದು ವಿಗ್ರಹದ ಮೇಲಿನ ಒಟ್ಟು ಚಿನ್ನವನ್ನು 69 ಕೆಜಿಗೆ ಮತ್ತು ಬೆಳ್ಳಿಯನ್ನು 336 ಕೆಜಿಗೆ ಹೆಚ್ಚಿಸಿದೆ ಎಂದು ಜಿಎಸ್ಬಿ ಸೇವಾ ಮಂಡಲದ ಪ್ರತಿನಿಧಿ ತಿಳಿಸಿದ್ದಾರೆ.
ಈ ವರ್ಷ, ನಾವು 69 ನೇ ‘ಗಣಪತಿ ಉತ್ಸವ’ವನ್ನು ಆಚರಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್ 19 ಮತ್ತು ಸೆಪ್ಟೆಂಬರ್ 20 ರಂದು ವಿಶೇಷ ‘ಹವನ’ ನಡೆಸಲಾಗುವುದು ಎಂದು ಪ್ರತಿನಿಧಿ ಉಲ್ಲೇಖಿಸಿದ್ದಾರೆ.
ಸೆಪ್ಟೆಂಬರ್ 19 ರಂದು ಆಚರಿಸಲಾಗುವ ಆಚರಣೆಯು ಚಂದ್ರಯಾನ -3 ಮಿಷನ್ ಯಶಸ್ವಿಗಾಗಿ ಗಣೇಶನಿಗೆ ಧನ್ಯವಾದ ಅರ್ಪಿಸುವುದಾಗಿದೆ. ಮುಂದಿನ ದಿನದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಉದ್ಘಾಟನೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಲಾಗುತ್ತದೆ ಮತ್ತು ಹಾರೈಸಲಾಗುತ್ತದೆ.
ಸೆಪ್ಟೆಂಬರ್ 20 ರಂದು ನಾವು ಅಯೋಧ್ಯೆಯಲ್ಲಿ ರಾಮ ಮಂದಿರದ ಸುಗಮ ನಿರ್ಮಾಣಕ್ಕಾಗಿ ವಿಶೇಷ ‘ಹವನ’ ನಡೆಸುತ್ತೇವೆ. ಸೆಪ್ಟೆಂಬರ್ 19 ರಂದು, ಚಂದ್ರಯಾನ-3 ಮಿಷನ್ ಯಶಸ್ವಿಯಾಗಿದ್ದಕ್ಕಾಗಿ ನಾವು ವಿಶೇಷ ‘ಹವನ’ ನಡೆಸುತ್ತೇವೆ. ಯಶಸ್ವಿ ಕಾರ್ಯಾಚರಣೆಗಾಗಿ ನಾವು ಪ್ರಾರ್ಥಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ದುಬಾರಿ ಅಲಂಕಾರ ಮತ್ತಿತರ ಕಾರಣಗಳಿಂದಾಗಿ ಈ ಗಣೇಶನಿಗೆ ಪ್ರತಿವರ್ಷ ವಿಮೆ ಕೂಡ ಮಾಡಿಸಲಾಗುತ್ತದೆ. ಈ ಬಾರಿಯ ವಿಮೆ ಮೊತ್ತವೇ 360 ಕೋಟಿ ರೂಪಾಯಿಗಳಾಗಿದೆ. ಕಳೆದ ವರ್ಷ 316 ಕೋಟಿ ರೂ. ವಿಮೆ ಮಾಡಿಸಲಾಗಿತ್ತು. ಪ್ರತಿನಿಧಿಯ ಹೇಳಿಕೆಯ ಪ್ರಕಾರ, ಈ ವರ್ಷ ಜಿಎಸ್ಬಿ ಮಂಡಳ ಒಟ್ಟು ರೂ 360.45 ಕೋಟಿ ವಿಮೆ ಮಾಡಿಸಿದೆ. ಇದರಲ್ಲಿ ಮಂಡಳದ ಸಂದರ್ಶಕರಿಗೆ 290 ಕೋಟಿ ರೂ.ಗಳು, ಆಭರಣಗಳಿಗೆ 39 ಕೋಟಿ ರೂ.ಗಳು ಮತ್ತು ಸಾರ್ವಜನಿಕ ಹೊಣೆಗಾರಿಕೆಗಾಗಿ 20 ಕೋಟಿಗಳು ರೂ.ಗಳು ಇದರಲ್ಲಿ ಸೇರಿವೆ.
ಈ ಸಲ ಸೆ.19ರಿಂದ 23ರವರೆಗೂ ಇಲ್ಲಿ ಗಣೇಶ ಚತುರ್ಥಿ ಉತ್ಸವ ಆಚರಣೆ ಮಾಡಲಾಗುತ್ತದೆ. ಈ ವರ್ಷ ಮಾಡಿದ ಭದ್ರತಾ ವ್ಯವಸ್ಥೆಗಳ ಬಗ್ಗೆ ವಿವರಿಸಿದ ಅವರು, ಭದ್ರತೆಗೆ ಸಂಬಂಧಿಸಿದಂತೆ, ಈ ವರ್ಷ ಮುಖ ಗುರುತಿಸುವಿಕೆ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ.
ಮಹಾರಾಷ್ಟ್ರದಾದ್ಯಂತ ಗಣೇಶ ಚತುರ್ಥಿಯನ್ನು 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವರ್ಷ ಉತ್ಸವವು ಸೆಪ್ಟೆಂಬರ್ 19 ರಂದು ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 29 ರವರೆಗೆ 10 ದಿನಗಳವರೆಗೆ ಮುಂದುವರಿಯುತ್ತದೆ.