ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನ ಅ.2 ರಂದು ಆಚರಣೆ ಮಾಡಲಾಯಿತು. ಎರಡು ಮಹಾನ್ ಚೇತನಗಳಿಗೆ ಗೌರವ ನಮನ ಸಲ್ಲಿಸಲಾಯಿತು.
ಉಪನಿರ್ದೇಶಕ ರಾಮಯ್ಯ ಅವರು ಪೂಜೆ ನೆರವೇರಿಸಿ ಮಾತನಾಡಿ,ಗಾಧೀಜಿ ಅವರ ತತ್ವ ಚಿಂತನೆ ಸಿದ್ಧಾಂತಗಳು ಇಂದಿಗೂ ಪ್ರಸ್ತುತ,ಪ್ರತಿಯೊಬ್ಬರೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.’ಜೈ ಜವಾನ್ ಜೈ ಕಿಸಾನ್’ ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಶಾಸ್ತ್ರಿಯವರನ್ನು ಈ ಸಂದರ್ಭದಲ್ಲಿ ಆವರು ನೆನೆದರು.
ಅಧೀಕ್ಷಕರಾದ ಎ ಎ ಕಾಂಬಳೆ, ಪ್ರಕಾಶ ಇಚಲಕರಂಜಿ, ಸುಮಿತ್ ಕಾವಳೆ, ಈರಣ್ಣ ಜೊಂಡ್ ಮತ್ತಿತರರು ಮತ್ತು ವಿಧ್ಯಾರ್ಥಿಗಳು,ಸಾರ್ವಜನಿಕರು ಹಾಜರಿದ್ದರು.ಗಾಂಧಿಜಿಯವರ ಜೀವನ ಸಾಧನೆಯ ಕುರಿತು ಪುಸ್ತಕ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.