ಬೆಳಗಾವಿ : ಬೆಳಗಾವಿಯ ಹಿರಿಯ ಪತ್ರಕರ್ತ ಚಂದ್ರಕಾಂತ ಚಾಂಗ ದೇವ ಕುಂಡೇಕರ ಏಪ್ರಿಲ್ 15 ರಂದು ಸಂಜೆ 5 ರ ಸುಮಾರಿಗೆ ನಿಧನರಾದರು. ಅವರಿಗೆ 52 ವಯಸ್ಸಾಗಿತ್ತು.
ವಿಜಯನಗರ 2ನೇ ಕ್ರಾಸ್ ನಿವಾಸಿಯಾಗಿದ್ದ ಅವರಿಗೆ
ಪತ್ನಿ, ಇಬ್ಬರು ಪುತ್ರರಿದ್ದಾರೆ.
ಏಪ್ರಿಲ್ 16 ಮಂಗಳವಾರ ಬೆಳಗ್ಗೆ 9 ಗಂಟೆಗೆ ಹಿಂಡಲಗಾ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಅವರು ಇನ್ ನ್ಯೂಸ್ ಟಿವಿ ಚಾನೆಲ್ನಲ್ಲಿ ಮರಾಠಿ ನ್ಯೂಸ್ಗೆ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ದಶಕಗಳಿಂದ ಅವರು ಸಕಾಳ, ಪುಣ್ಯನಗರಿ, ಲೋಕಮತ, ಪುಢಾರಿ ಮುಂತಾದ ಬೆಳಗಾವಿಯ ಮರಾಠಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಸ್ನೇಹಜೀವಿಯಾಗಿದ್ದ ಅವರ ನಿಧನಕ್ಕೆ ಬೆಳಗಾವಿಯ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ.