ಜನ ಜೀವಾಳ ಪ್ರತಿನಿಧಿ: ಬೆಳಗಾವಿ: ಬೆಳಗಾವಿ ಮಹಾನಗರಿ ಶುಕ್ರವಾರ ಇಬ್ಬರು ಮಹಾ ನಾಯಕರ ಸಮಾಗಮಕ್ಕೆ ಸಾಕ್ಷಿಯಾಯಿತು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ , ಕೇಂದ್ರದ ಮಾಜಿ ಸಚಿವ ಹಾಗೂ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಬೆಳಗಾವಿಯಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರನ್ನು ಭೇಟಿಯಾಗಿ ಕೆಲ ಹೊತ್ತು ಚರ್ಚಿಸಿದರು.
ಇದೊಂದು ಸೌಹಾರ್ದಯತ ಭೇಟಿಯಾಗಿದೆ. ಶರದ್ ಪವಾರ್ ಹಾಗೂ ಪ್ರಭಾಕರ ಕೋರೆ ಅವರ ಸ್ನೇಹ ಸಂಬಂಧಕ್ಕೆ ದಶಕಗಳ ಇತಿಹಾಸವಿದೆ. ಇಬ್ಬರೂ ನಾಯಕರು ತಮ್ಮ ಹಳೆಯ ಸ್ನೇಹವನ್ನು ಕೆಲಹೊತ್ತು ಮೆಲಕು ಹಾಕಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು.