ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಗುರುವಾರ ಮತ್ತೆ ಮೂರು ಎಕ್ಸಿಟ್ ಪೋಲ್ಗಳು ಶುಕ್ರವಾರ ಹೊರಬಿದ್ದಿದ್ದು, ಮೂರೂ ಸಮೀಕ್ಷೆಗಳು ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಹೇಳಿದೆ.
ಬುಧವಾರ 11 ಎಕ್ಸಿಟ್ ಪೋಲ್ಗಳಲ್ಲಿ 9 ಎಕ್ಸಿಟ್ ಪೋಲ್ಗಳು ಬಿಜೆಪಿ ನೇತೃತ್ವದ ಎನ್ಡಿಎ ಬಹುಮತ ಪಡೆಯಬಹುದು ಎಂದು ಹೇಳಿದ್ದವು. ಎರಡು ಸಮೀಕ್ಷೆಗಳು ಆಮ್ ಆದ್ಮಿ ಪಾರ್ಟಿ ಅಧಿಕಾರ ಉಳಿಸಿಕೊಳ್ಳಬಹುದು ಎಂದು ಹೇಳಿದ್ದವು. ಗುರುವಾರ ಹೊರಬಿದ್ದ ಮೂರೂ ಸಮೀಕ್ಷೆಗಳು ಬಿಜೆಪಿ ಸ್ಪಷ್ಟಬಹುಮತ ಪಡೆಯಬಹುದು ಎಂದು ಹೇಳಿವೆ. ಹಿಂದಿನ ಚುನಾವಣೆಯಂತೆಯೇ ಕಾಂಗ್ರೆಸ್ ಮತ್ತೊಂದು ನೀರಸ ಪ್ರದರ್ಶನ ನೀಡಲಿದೆ ಎಂದು ಅಂದಾಜಿಸಲಾಗಿದೆ.
ಗುರುವಾರ, ಆಕ್ಸಿಸ್ ಮೈ ಇಂಡಿಯಾ, ಸಿಎನ್ಎಕ್ಸ್ ಹಾಗೂ ಟುಡೇʼಸ್ ಚಾಣಕ್ಯ ಈ ಮೂರು ಎಕ್ಸಿಟ್ ಪೋಲ್ಗಳು ಬಿಜೆಪಿಗೆ ಭಾರಿ ಗೆಲುವು ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದೆ ಎಂದು ಭವಿಷ್ಯ ನುಡಿದಿವೆ. ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸಮೀಕ್ಷೆಯ ಪ್ರಕಾರ, ದೆಹಲಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ನಂಬರ್ 1 ಆಯ್ಕೆಯಾಗಿದ್ದಾರೆ. ಬಿಜೆಪಿಯ ಪರ್ವೇಶ ವರ್ಮಾ ಮತ್ತು ಮನೋಜ ತಿವಾರಿ ಅವರು ಪ್ರಮುಖ ಪಾತ್ರಕ್ಕಾಗಿ ಎರಡನೇ ಮತ್ತು ಮೂರನೇ ಆದ್ಯತೆಯ ಅಭ್ಯರ್ಥಿಗಳಾಗಿದ್ದಾರೆ.
ಆಕ್ಸಿಸ್ ಮೈ ಇಂಡಿಯಾದ ಎಕ್ಸಿಟ್ ಪೋಲ್ ಪ್ರೊಜೆಕ್ಷನ್
ಬಿಜೆಪಿ+ 45-55 (48%ರಷ್ಟು ಮತಗಳು)
ಎಎಪಿ – 15-25 (42%ರಷ್ಟು ಮತಗಳು)
ಕಾಂಗ್ರೆಸ್ 0-1 (07%ರಷ್ಟು ಮತಗಳು)
ಇತರೆ 0-1 (03%ರಷ್ಟು ಮತಗಳು)
ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.
CNX ನ ಎಕ್ಸಿಟ್ ಪೋಲ್ ಪ್ರೊಜೆಕ್ಷನ್
ಬಿಜೆಪಿ : 49-61 (49.05%ರಷ್ಟು ಮತಗಳು)
ಎಎಪಿ : 10-19 (41.52%ರಷ್ಟು ಮತಗಳು)
ಕಾಂಗ್ರೆಸ್ : 0-1 (5.37%ರಷ್ಟು ಮತಗಳು)
ಇತರೆ : 0-1 (4.06%ರಷ್ಟು ಮತಗಳು)
ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.
ಟುಡೇʼಸ್ ಚಾಣಕ್ಯ ಎಕ್ಸಿಟ್ ಪೋಲ್ ಪ್ರಾಜೆಕ್ಷನ್
ಬಿಜೆಪಿ : 51± 6
ಎಎಪಿ : 19 ± 6
ಇತರೆ : 0 ± 3